ಕಡಿರುದ್ಯಾವರದಲ್ಲಿ ವೈದ್ಯರ ನಡೆ ಕಾಡಿನ ಕಡೆ ಆರೋಗ್ಯ ಶಿಬಿರ

0

ಕಡಿರುದ್ಯಾವರ: ಬುಡಕಟ್ಟು ಜನಾಂಗದವರಿಗಾಗಿ ‘ವೈದ್ಯರ ನಡೆ ಕಾಡಿನ ಕಡೆ’ ಅನ್ನುವ ವಿಶಿಷ್ಟ ಆರೋಗ್ಯ ಶಿಬಿರವನ್ನು ಕಡಿರುದ್ಯಾವರ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲ ಆಯೋಜನೆ ಮಾಡಿತ್ತು. ಮಹಿಳಾ ಮಂಡಲದ ಕಟ್ಟಡದಲ್ಲಿ ನಡೆದ ಆರೋಗ್ಯ ಶಿಬಿರವು, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಘಟಕ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಂಗಳೂರು ಬ್ರಾಂಚ್ ಇದರ ಕಾರ್ಯದರ್ಶಿ ಡಾಕ್ಟರ್ ಅವಿನ್ ಆಳ್ವ ಅವರ ಮುಂದಾಳತ್ವದಲ್ಲಿ ನಡೆಯಿತು.

ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಡಾಕ್ಟರ್ ಅವಿನ್ ಆಳ್ವ, ಕಟ್ಟ ಕಡೆಯ ಜನಾಂಗವಾದ ಬುಡಕಟ್ಟು ಸಮುದಾಯಕ್ಕೆ ವೈದ್ಯಕೀಯ ಸೇವೆ ದೊರೆತರೆ ಅದು ವೈದ್ಯಕೀಯ ವೃತ್ತಿಗೆ ಸಾರ್ಥಕತೆ ದೊರೆದಂತೆ, ಅದರ ಜೊತೆ ವೈದ್ಯರಿಗೂ ಇದರಿಂದ ಮಾನಸಿಕ ನೆಮ್ಮದಿ, ಶಾಂತಿ ಸಿಗುತ್ತದೆ ಎಂದು ಹೇಳಿದರು.

ಸ್ಥಳೀಯ ಮಲೆಕುಡಿಯ ಜನಾಂಗದ ಮುಖ್ಯಸ್ಥ ಐತಪ್ಪ ಮಲೆಕುಡಿಯ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು,

ಮುಖ್ಯ ಅತಿಥಿಗಾಗಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ತಾಲೂಕು ಅನುಷ್ಠಾನ ಸಮಿತಿಯ ನಾಮನಿರ್ದೇಶಿತ ಸದಸ್ಯ ಕೆ .ನೇಮಿರಾಜ್ ಭಾಗವಹಿಸಿದ್ದರು. ಶಿಬಿರದಲ್ಲಿ ಸುಮಾರು 45 ಮಂದಿ ಭಾಗವಹಿಸಿದ್ದರು. ಸಂಧ್ಯಾ ಹೆಬ್ಬಾರ್ ಸಿರಿಬೈಲು ಪ್ರಾರ್ಥಿಸಿ, ಭಾರತಿ ಉದ್ಧಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here