



ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ನ ಸಹ ಘಟಕವಾದ ರಾಜ ಕೇಸರಿ ಬಂಟ್ವಾಳ ತಾಲೂಕು ಇದರ ನೂತನ ಪದಾಧಿಕಾರಿಗಳ ಆಯ್ಕೆ ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ ನಡೆಯಿತು.


ರಾಜ ಕೇಸರಿ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಗೌತಮ್ ಪೂಜಾರಿ ನೆಲ್ಲಿಗುಡ್ಡೆ ಇವರು ಅವಿರೋಧವಾಗಿ ಆಯ್ಕೆಯಾಗಿ, ಉಪಾಧ್ಯಕ್ಷರಾಗಿ ಶೇಖರ್ ಕುಲಾಲ್ ನೆಲ್ಲಿಗುಡ್ಡೆ, ಸಂಚಾಲಕರಾಗಿ ರಮೇಶ್ ನಾಯ್ಕ್ ಕಳಮೆ, ಸಹ ಸಂಚಾಲಕರಾಗಿ ರಾಕೇಶ್ ಆಚಾರ್ಯ ಕಳಮೆ, ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ್ ಗೌಡ, ಜೊತೆ ಕಾರ್ಯದರ್ಶಿಯಾಗಿ ಅಶೋಕ್ ಬಿಸಿ ರೋಡ್, ಸಂಘಟನಾ ಕಾರ್ಯದರ್ಶಿಯಾಗಿ ದಯಾನಂದ್ ನಾಯ್ಕ್, ಕೋಶಾಧಿಕಾರಿಯಾಗಿ ಹರೀಶ್ ಪೊಳಲಿ, ಸಾಮಾಜಿಕ ಜಾಲತಾಣ ಧನುಷ್ ಇವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ರಾಜ ಕೇಸರಿ ಜಿಲ್ಲಾ ಸಂಚಾಲಕ ಪ್ರಸಾದ್ ಕುಲಾಲ್ ಮತ್ತು ರಾಜ ಕೇಸರಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಂದೀಪ್ ಬೆಳ್ತಂಗಡಿ ಮತ್ತು ಸದಸ್ಯರು ಉಪಸ್ಥಿತರಿದ್ದರು.


            






