ಬಳಂಜ: ಯಕ್ಷಪ್ರಿಯ ಸಮಿತಿ ನಾಲ್ಕೂರು-ಬಳಂಜ ಇದರ ನೇತೃತ್ವದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.7 ಮತ್ತು 8ರಂದು ನಾಲ್ಕೂರು ನಿಟ್ಟಡ್ಕ ಮೈದಾನದಲ್ಲಿ ನಡೆಯಿತು. ಸ್ಥಾಪಕ ಅಧ್ಯಕ್ಷ ಸಂಜೀವ ಶೆಟ್ಟಿ ಖಂಡಿಗ ಇವರ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಗಣಪತಿ ದೇವರಿಗೆ ಮಹಾ ಗಣಯಾಗ, ಮೂಡಪ್ಪ ಸೇವೆ, ಮುಂಬಯಿ ಕಲಾವಿದರಿಂದ ಯಕ್ಷಗಾನ ಕಥಾ ಪ್ರಸಂಗ, ಶನೀಶ್ವರ ಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಪುಷ್ಪಾ ಗಿರೀಶ್ ರವರ ನೇತೃತ್ವದಲ್ಲಿ ಪಂಚಶ್ರೀ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಹಾಗೂ ಬಳಂಜ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವೆ ನಡೆಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಶೆಟ್ಟಿ, ಸದಾನಂದ ತೋಟದಪಲ್ಕೆ, ಹರೀಶ್ ಮಜ್ಜೆನಿ, ಕೋಶಾಧಿಕಾರಿ ರವೀಂದ್ರ ಬಿ.ಅಮೀನ್ ಹಾಗೂ ಸಮಿತಿಯ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೆ.8ರಂದು ಗಣಪತಿ ದೇವರ ಭವ್ಯ ಶೋಭಯಾತ್ರೆ ನಡೆಯಿತು.
ಕೇರಳ ಚೆಂಡೆ ಹಾಗೂ ತಾಲೂಕಿನ ವಿವಿಧ ಕುಣಿತ ಭಜನಾ ತಂಡಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ನಾಲ್ಕೂರು ಡೆಂಜೋಲಿ ಸಮೀಪ ಫಲ್ಗುಣಿ ನದಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಿತು.