ರೋಟರಿ ಆನ್ಸ್ ಕ್ಲಬ್ ನಿಂದ ವಿಶ್ವ ತೆಂಗು ದಿನಾಚರಣೆ

0

ಉಜಿರೆ: ರೋಟರಿ ಕ್ಲಬ್ ಬೆಳ್ತಂಗಡಿ, ಆನ್ಸ್ ಕ್ಲಬ್ ಬೆಳ್ತಂಗಡಿ ಹಾಗೂ ಪ್ರಗತಿ ಮಹಿಳಾ ಮಂಡಲ ಉಜಿರೆ ಜತೆಯಾಗಿ ವಿಶ್ವ ತೆಂಗಿನ ದಿನಾಚರಣೆಯನ್ನು ಆಚರಿಸಿತು. ಈ ಸಂಧರ್ಭದಲ್ಲಿ ಕೆ.ಎಂ.ಫ್ ಉಜಿರೆಯ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಮಾಚಾರಿನ ಹಾಲು ಸಂಗ್ರಹಣಾ ಕೇಂದ್ರದಲ್ಲಿ ಅಲ್ಲಿನ ಹೈನುಗಾರರಿಗೆ ಸುಮಾರು ನೂರಕ್ಕೂ ಅಧಿಕ ತೆಂಗಿನ ಗಿಡಗಳನ್ನು ಕೊಡುವ ಮೂಲಕ ತೆಂಗಿನ ದಿನಾಚರಣೆಯನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಿದರು.

ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ರೊ ಸಂದೇಶ್ ರಾವ್, ರೊ.ಶ್ರೀಧರ ಕೆ.ವಿ., ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್ , ಕಾರ್ಯದರ್ಶಿ ಡಾ.ವಿನಯಾ ಕಿಶೋರ್, ಪ್ರಗತಿ ಮಹಿಳಾ ಮಂಡಲ ಉಜಿರೆ ಅಧ್ಯಕ್ಷೆ ಜಯಶ್ರೀ ಪ್ರಕಾಶ್, ಸದಸ್ಯೆ ಗೀತಾ ವಿಶ್ವಾಸ್ ರಾವ್ ಉಜಿರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕೂಡಿಗೆ ಕಾರ್ಯದರ್ಶಿ ಸೌಮ್ಯ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here