ನಾರಾವಿ: ನೈಜ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಮೂಲಭೂತ ದಾಖಲೆಗಳ ನೋಂದಣಿ ಕಾರ್ಯಕ್ರಮದ ಮಹಾ ಅಭಿಯಾನ-2 ಕಾರ್ಯಕ್ರಮದಲ್ಲಿ ಕೊರಗ ಸಮುದಾಯಕ್ಕೆ ಅವಶ್ಯವಿರುವ ಸರ್ಕಾರಿ ದಾಖಲೆಗಳಾದ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ ಹಾಗೂ ಅಭಾಕಾರ್ಡ್ ಗಳನ್ನು ಒದಗಿಸಲು ವಿವಿಧ ಇಲಾಖೆಗಳ ಸಮ್ಮುಖದಲ್ಲಿ ಸೆ.4ರಂದು ನಾರಾವಿ ಗ್ರಾಮ ಪಂಚಾಯತ್‌ನಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಸೂಕ್ತ ದಾಖಲೆಗಳನ್ನು ನೀಡಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೇಮಚಂದ್ರ ಮಾತನಾಡಿ, ಆದಿವಾಸಿ ಕೊರಗ ಸಮುದಾಯದಲ್ಲಿ ಸರಕಾರಿ ದಾಖಲೆಗಳು ಇಲ್ಲದೇ ಇರುವುದರಿಂದ, ಸರಕಾರದ ಯೋಜನೆಗಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ಆದುದರಿಂದ ಈ ಜನ್ ಮನ್ ಕಾರ್ಯಕ್ರಮದಲ್ಲಿ ಕೊರಗ ಸಮುದಾಯದವರು ಎಲ್ಲಾ ದಾಖಲೆಗಳನ್ನು ಪಡೆಯುವಲ್ಲಿ, ವಿವಿಧ ಇಲಾಖೆಗಳು ಈ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ, ಸುಲಭವಾಗಿ ದಾಖಲೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ನಾರಾವಿ ಗ್ರಾ.ಪಂ.ಅಧ್ಯಕ್ಷ ರಾಜವರ್ಮ ಜೈನ್, ಉಪಾಧ್ಯೆಕ್ಷೆ ಸುಮಿತ್ರಾ, ಪಿಡಿಓ ಸುಧಾಕರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶೇಷಗಿರಿ ನಾಯಕ ಹಾಗೂ ಕೊರಗ ಸಮುದಾಯದವರು ಉಪಸ್ಥಿತರಿದ್ದರು. ಗಿರಿಜನ ಕಲ್ಯಾಣ ವಿಸ್ತರಣಾಧಿಕಾರಿ ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು.