




ಬೆಳ್ತಂಗಡಿ: ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಇದರ ವಾರ್ಷಿಕ ಮಹಾಸಭೆಯು ಸೆ.1ರಂದು ಬೆಳ್ತಂಗಡಿ ಸಿ.ವಿ.ಸಿ. ಮಿನಿ ಹಾಲ್ ನಲ್ಲಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿರುವ ಇದೀಗ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಜಯಾನಂದ ಗೌಡ ಅವರನ್ನು ಸಭೆಯಲ್ಲಿ ಗೌರವಿಸಲಾಯಿತು.ಸಂಘಟನೆಯ ಚಟುವಟಿಕೆಗಳ ಬಗ್ಗೆ ಹಾಗೂ ಹೆದ್ದಾರಿಯ ಕಾಮಗಾರಿ, ರಸ್ತೆ ಅಗಲೀಕರಣದ ಸಂದರ್ಭದಲ್ಲಿ ವರ್ತಕರಿಗೆ ಆಗುವಂತಹ ತೊಂದರೆಗಳನ್ನು ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ತಂದು ಸರಿಪಡಿಸುವ ಬಗ್ಗೆ ಚರ್ಚಿಸಲಾಯಿತು.



ನೂತನ ಪದಾಧಿಕಾರಿಗಳ ಆಯ್ಕೆ: ಮುಂದಿನ 2 ವರ್ಷದ ಅವಧಿಗೆ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರೊನಾಲ್ಡ್ ಲೋಬೋ, ಕಾರ್ಯದರ್ಶಿಯಾಗಿ ಲ್ಯಾನ್ಸಿ ಎ. ಪಿರೇರಾ, ಕೋಶಾಧಿಕಾರಿಯಾಗಿ ಸುನೀಲ್ ಶೆಣೈ, ಉಪಾಧ್ಯಕ್ಷರಾಗಿ ಶಶಿಧರ ಪೈ ಆಯ್ಕೆಯಾದರು. ಹಾಗೂ 30 ಮಂದಿ ಸದಸ್ಯರನ್ನು ಆಡಳಿತ ಮಂಡಳಿಗೆ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿ ರೋನಾಲ್ಡ್ ಲೋಬೊ ವರದಿ ಮಂಡಿಸಿದರು. ಕೋಶಾಧಿಕಾರಿ ಸುನೀಲ್ ಶೆಣೈ ಲೆಕ್ಕ ಪತ್ರ ಮಂಡಿಸಿದರು. ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ಜತೆ ಕಾರ್ಯದರ್ಶಿ ಯಶವಂತ ಪಟವರ್ಧನ್ ಮಹಾಸಭೆಯ ನೋಟಿಸು ಓದಿ ದಾಖಲಿಸಿದರು. ಸುಶೀಲಾ ಹೆಗ್ಡೆ ಪ್ರಾರ್ಥನೆಗೈದರು. ಲ್ಯಾನ್ಸಿ ಎ.ಪಿರೇರಾ ಕಾರ್ಯಕ್ರಮ ನಿರೂಪಿಸಿದರು.









