ಕೊಯ್ಯೂರು: ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಪಂದ್ಯಾಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಹರೀಶ್ ಪೂಂಜ ಅವರು ವಿದ್ಯಾರ್ಥಿಗಳಿಗೆ ಶುಭಾಶಯಗೈದರು. ಅವರು ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಆ.31ರಂದು ನಡೆದ ಬೆಳ್ತಂಗಡಿ ತಾಲೂಕು ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟವನ್ನು ಉದ್ಘಾಟನೆಗೈದು ಮಾತನಾಡಿದರು ಜಿಲ್ಲಾ ಮಟ್ಟದಲ್ಲಿ ಪಾಲ್ಗೊಲ್ಲುವ ತಾಲೂಕು ತಂಡಕ್ಕೆ ಸಮವಸ್ತ್ರವನ್ನು ನೀಡುವ ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಲೋಕೇಶ್ ಪಾoಬೇಲು, ಹೇಮಾವತಿ ಕಡಮ್ಮಜೆ, ಇಸುಬು ಹಾಗೂ ಕೊಯ್ಯೂರು ಪ್ಯಾಕ್ಸ್ ಅಧ್ಯಕ್ಷ ನವೀನ್ ಕುಮಾರ್ ವಾದ್ಯಕೋಡಿ, ಪ್ಯಾಕ್ಸ್ ನಿರ್ದೇಶಕ ಅಶೋಕ್ ಕುಮಾರ್ ಅಗ್ರಸಾಲೆ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ, ಕೊಯ್ಯೂರು ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಛಮೆ ಭಾಗವಹಿಸಿದ್ದರು.
ವಿದ್ಯಾರ್ಥಿನಿ ಕುಮಾರಿ ರಂಝಿನ ಕಾರ್ಯಕ್ರಮದ ಪ್ರಾಯೋಜ ಸಲೀಂ ಬಿ.ಕೆ.ರೆಜಿಸ್ಟ್ರಾರ್, ಸಹಕಾರ ಇಲಾಖೆ, ಬೆಂಗಳೂರು ಮತ್ತು ಮಂಗಳೂರು ಪ್ರಾದೇಶಿಕ ಮುಖ್ಯಸ್ಥರು ಬದಿಯಡ್ಕ ತ್ರಿಶೂರ್, ಕ್ಯಾಂಪ್ಕೋ ಮಂಗಳೂರು ಇವರುಗಳ ಸಂದೇಶ ವಾಚನ ವಾಚಿಸಿದರು.
ವಿದ್ಯಾರ್ಥಿನಿಯರಾದ ರಂಝಿನ, ಭವ್ಯ, ಪ್ರಜ್ಞಾ, ವಿನಯ, ಚಿರಸ್ವಿ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ ಸ್ವಾಗತಿಸಿ, ಅರ್ಥ ಶಾಸ್ತ್ರ ಉಪನ್ಯಾಸಕಿ ತೃಪ್ತಿ ವಂದಿಸಿದರು. ಇತಿಹಾಸ ಉಪನ್ಯಾಸಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ರಶ್ಮಿ ದೇವಿ, ಭವ್ಯ, ಪ್ರೀತಿ, ಮಾಯಿಲ, ಸಂತೋಷ್ ಸಹಕರಿಸಿದರು.