ಸೆ.8: ಕನ್ಯಾ ಮರಿಯಮ್ಮ ಜನ್ಮದಿನ- ಇಂದಿನಿಂದ ನೊವೇನಾ ಪ್ರಾರಂಭ

0

ಉಜಿರೆ: ಸೆ.8ರಂದು ಕರಾವಳಿಯಾದ್ಯಂತ ಆಚರಿಸುವ ಕನ್ಯಾ ಮರಿಯಮ್ಮ ಜನ್ಮ ದಿನದ ಪ್ರಯುಕ್ತ ಆ.30ರಿಂದ ನವ ದಿನಗಳ ನೊವೇನಾ ಇಂದಿನಿಂದ ಪ್ರಾರಂಭಗೊಂಡಿದೆ.

ಬೆಳಿಗ್ಗೆ ಎದ್ದು ಮಕ್ಕಳು ಸಹಿತ ಹಿರಿಯರೂ ಸೇರಿ ಕನ್ಯಾ ಮರಿಯಮ್ಮಳಿಗೆ ಹೂ ಅರ್ಪಿಸಿ ಪ್ರಾರ್ಥನಾ ವಿಧಿಯಲ್ಲಿ ಆ.30ರಂದು ನಡೆಯಿತು.

ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ವ.ಫಾ.ಅಬೆಲ್ ಲೋಬೊ ದಿವ್ಯ ಬಲಿ ಪೂಜೆಯೊಂದಿಗೆ ನೊವೇನಾ ನೆರವೇರಿಸಿದರು.

ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ ಫಾ.ವಿಜಯ್ ಲೋಬೊ ವಿವಿಧ ಅಗತ್ಯತೆಗಳಿಗಾಗಿ ಪ್ರಾರ್ಥನೆ ನೆರವೇರಿಸಿದರು.

ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್ ಹಾಗೂ ಪಾಲನಾ ಮಂಡಳಿ ಸದಸ್ಯರ ಹಾಗೂ ದಾನಿಗಳ ನೇತೃತ್ವದಲ್ಲಿ ಪ್ರತೀ ದಿನ ಆಗಮಿಸಿದ ಭಕ್ತಾದಿಗಳಿಗೆ ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here