ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2024-25ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅನ್ ಲೈನ್ ಅರ್ಜಿ ಆಹ್ವಾನ

0

ಬೆಳ್ತಂಗಡಿ: ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2024-25ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ರಾಜ್ಯ ವಿದ್ಯಾರ್ಥಿ ವೇತನ (ssp) ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ.

ಇಲಾಖಾ ವೆಬ್ ಸೈಟ್:www.sw.kar.nic.in/www.twd.karnataka.gov.in

ವಿದ್ಯಾರ್ಥಿ ಇರಬೇಕಾದ ಅರ್ಹತೆಗಳು: ಮಾನ್ಯತೆ ಪಡೆದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳು, ವಿದ್ಯಾರ್ಥಿಯ ಪೋಷಕರ ಕುಟುಂಬದ ಆದಾಯ ಮಿತಿ ವಾರ್ಷಿಕ ರೂ.2.50 ಲಕ್ಷಗಳ ಮಿತಿಯೊಳಗೆ ಇರತಕ್ಕದ್ದು, ವಿದ್ಯಾರ್ಥಿಯ ಮುಂದಿನ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಹೊಂದಿರತಕ್ಕದ್ದು,

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: ವಿದ್ಯಾರ್ಥಿ/ಪೋಷಕರ ಆಧಾರ್ ಸಂಖ್ಯೆ, ವಿದ್ಯಾರ್ಥಿಯ ಕಾಲೇಜು ಮತ್ತು ಕೋರ್ಸ್ ನು ವಿವರಗಳು/ನೋಂದಣಿ ಸಂಖ್ಯೆ, ವಿದ್ಯಾರ್ಥಿ/ಪೋಷಕರ ಮೊಬೈಲ್ ಸಂಖ್ಯೆ, ಜಾತಿ ಆದಾಯ ಪತ್ರದ ಆರ್.ಡಿ.ಸಂಖ್ಯೆ ಸಂಖ್ಯೆ ಪ್ರತಿ, ವಿದ್ಯಾರ್ಥಿಯ ಎಸ್.ಎಸ್.ಎಲ್.ಸಿ ನೋಂದಣಿ ಸಂಖ್ಯೆ, ವಿದ್ಯಾರ್ಥಿಗಳ ಎಸ್.ಎ.ಟಿ.ಎಸ್ ಗುರುತಿನ ಸಂಖ್ಯೆ/ಕಾಲೇಜು ನೋಂದಣಿ ಸಂಖ್ಯೆ, ವಿದ್ಯಾರ್ಥಿಯ ಇಮೇಲ್ ಐಡಿ, ವಿದ್ಯಾರ್ಥಿಯ ಮನೆಯ ವಿಳಾಸ, ಸಂಬಂಧಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ), ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ).

LEAVE A REPLY

Please enter your comment!
Please enter your name here