ಬೆಳ್ತಂಗಡಿ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಗಸ್ಟ್ 28ರಂದು ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದಿರುತ್ತಾರೆ.
ಆಧ್ಯಾ ಬಿಆರ್(4ನೇ) ಚಿತ್ರಕಲೆ ಮತ್ತು ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ, ಸೃಷ್ಟಿ (7ನೇ) ದೇಶಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ, ಮನ್ವಿಕ್ ಕೆ ಯು (6ನೇ) ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ, ಅದಿತಿ(4ನೇ) ಅಭಿನಯಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೃತಿಕಾ(7ನೇ) ಕವನ ವಾಚನ ದ್ವಿತೀಯ ಸ್ಥಾನ, ಜುವೆಲ್ ಡಿಸೋಜ (3ನೇ) ಇಂಗ್ಲಿಷ್ ಕಂಠಪಾಠದಲ್ಲಿ ದ್ವಿತೀಯ ಸ್ಥಾನ, ಮಾನ್ವಿ ಎಸ್ ಶ್ರೀಯಾನ್(5ನೇ) ಆಶುಭಾಷಣದಲ್ಲಿ ದ್ವಿತೀಯ ಸ್ಥಾನ, ಸಾನ್ವಿ (7ನೇ) ಭಕ್ತಿಗೀತೆಯಲ್ಲಿ ದ್ವಿತೀಯ ಸ್ಥಾನ, ಅಬೆಲ್ ಲೆನಿನ್ (2ನೇ) ಛದ್ಮವೇಷ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಸಾನ್ವಿಕ್ ಜಿ ಆಚಾರ್ಯ (4ನೇ) ಕ್ಲೆ ಮಾಡೆಲಿಂಗ್ ನಲ್ಲಿ ತೃತೀಯ ಸ್ಥಾನ, ಸ್ಯಾನ್ಸಿಯಾ ಡಿಸೋಜ (4ನೇ) ಕನ್ನಡ ಕಂಠಪಾಠದಲ್ಲಿ ತೃತೀಯ ಸ್ಥಾನ, ದಿಯಾ ಮರಿಯಾ (4ನೇ) ದೇಶಭಕ್ತಿಗೀತೆಯಲ್ಲಿ ತೃತೀಯ ಸ್ಥಾನ, ವಿಹಾಗ್ ರಾವ್(4ನೇ) ಸಂಸ್ಕೃತ ಪಠಣದಲ್ಲಿ ತೃತೀಯ ಸ್ಥಾನ, ರೀವನ್ ಸೀಕ್ವೇರಾ (5ನೇ) ಇಂಗ್ಲೀಷ್ ಕಂಠಪಾಠದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಯ ಘನತೆಯನ್ನು ಹೆಚ್ಚಿಸಿದ್ದಾರೆ.
ಸಹಶಿಕ್ಷಕಿಯರಾದ ರೆನಿಟಾ ಲಸ್ರಾದೋ, ಲವೀನಾ ಡಿಸೋಜ, ಸುಮಿತ್ರ ಬಿ ಎಲ್ ಸಹಕರಿಸಿದರು.