ಮದ್ದಡ್ಕ ರಾಮ ಭಜನಾ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ಧಾರ್ಮಿಕ ಸಭೆ

0

ಕುವೆಟ್ಟು: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುವುದರೊಂದಿಗೆ ಜೀವನದಲ್ಲಿ ಕೃಷ್ಣನ ಸಂದೇಶವನ್ನು ನಮ್ಮಲ್ಲಿ ಮತ್ತು ನಮ್ಮ ಮಕ್ಕಳ ಜೀವನದಲ್ಲಿ ಪಾಲನೆಯಾಗಲಿ ಎಂದು ನಾವೂರು ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಅಮ್ಮುಣ್ಣಾಯ ಮೂಡೈಲು ಹೇಳಿದರು.ಅವರು ಶ್ರೀ ರಾಮ ಸೇವಾ ಸಮಿತಿ ಮದ್ದಡ್ಕ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮದ್ದಡ್ಕ ಇದರ ವತಿಯಂದ ಆ.26ರಂದು ಮದ್ದಡ್ಕ ರಾಮ ಭಜನಾ ಮಂದಿರದ ವಠಾರದಲ್ಲಿ ಜರಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜಾ ಆಗಮಿಸಿದ್ದರು ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ರಾಜ್ ಪ್ರಕಾಶ್ ಪಡ್ಡೈಲು, ಅಧ್ಯಕ್ಷ ಮನೋಹರ ಕೇದಳಿಕೆ, ಪ್ರಧಾನ ಕಾರ್ಯದರ್ಶಿ ಪ್ರೀತಮ್ ಆಚಾರ್ಯ, ಕೋಶಾಧಿಕಾರಿ ಸಚಿನ್ ವರ್ಧನ್ ಮದ್ದಡ್ಕ, ಮದ್ದಡ್ಕ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಗಣೇಶ್ ಶೆಟ್ಟಿ ಅರ್ಕಜೆ, ಮದ್ದಡ್ಕ ಭಜರಂಗದಳ ಸಂಚಾಲಕ ವಿನೋದ್ ಶೆಣೈ ಮದ್ದಡ್ಕ ಉಪಸ್ಥಿತರಿದ್ದರು.

ಪ್ರಭಾಕರ ಶೆಟ್ಟಿ ಉಪ್ಪಡ್ಕ ಸ್ವಾಗತಿಸಿ, ಆದಿತ್ರಿ ಮದ್ದಡ್ಕ ಪ್ರಾರ್ಥನೆಗೈದರು.ಉಮೇಶ್ ಕುಮಾರ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.ಬೆಳಿಗ್ಗೆ ಶ್ರೀರಾಮ ಭಜನಾ ಮಂದಿರದಲ್ಲಿ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಯಂ ರಘುರಾಮ ಭಟ್ ಮಠ ಪೂಜಾ ವೈದಿಕ ವಿಧಾನಗಳನ್ನು ನೆರವೇರಿಸಿ ಕ್ರೀಡಾ ಕೂಟಕ್ಕೆ ಚಾಲಣೆ ನೀಡಿದರು.

ಮಕ್ಕಳಿಗೆ, ಮಹನೀಯರಿಗೆ, ಮಹಿಳೆಯರಿಗೆ ವಿವಿಧ ಅಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.

ವಿಶೇಷವಾಗಿ ಮುದ್ದು ಕೃಷ್ಣ ಸ್ಪರ್ಧೆ ಜರಗಿತು.ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಶ್ರೀರಾಮ ಸೇವಾ ಸಮಿತಿಯ ಎಲ್ಲಾ ಪಧಾದಿಕಾರಿಗಳು ಸರ್ವ ಸದಸ್ಯರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.ರಾತ್ರಿ ಭಜನಾ ಮಂದಿರದಲ್ಲಿ ಶ್ರೀರಾಮ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here