ಬೆಳ್ತಂಗಡಿ: ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಹಾಗೂ ಸಮಿತಿಗಳನ್ನು ರಚಿಸಿ ಆದೇಶಿಸಿದಂತೆ ಬೆಳ್ತಂಗಡಿ ತಾಲೂಕು ಆಡಳಿತ ಕಚೇರಿಯಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಚೇರಿಯನ್ನು ಜಿಲ್ಲಾ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಉದ್ಘಾಟಿಸಿದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬೆಳ್ತಂಗಡಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಕಾರ್ಯಕ್ರಮದಲ್ಲಿ ಉಭಯ ಬ್ಲಾಕ್ ಕಾಂಗ್ರೇಸ್ ಘಟಕದ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್ ಗೌಡ, ಜಿ.ಪಂ ಮಾಜಿ ಸದಸ್ಯರಾದ ನಮಿತಾ ಕೆ ಪೂಜಾರಿ, ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡೀಸೋಜಾ, ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್, ಅಪರ ಸರಕಾರಿ ವಕೀಲ ಮನೋಹರ್ ಕುಮಾರ್, ಮಾಜಿ ತಾ.ಪಂ ಸದಸ್ಯರಾದ ಈಶ್ವರ ಭಟ್, ಪ್ರಮುಖರಾದ ವಿನ್ಸೆಂಟ್ ಡಿಸೋಜಾ, ಪ್ರವೀಣ್ ಫೆರ್ನಾಂಡೀಸ್ ಉಜಿರೆ, ಗೋಪಿನಾಥ ನಾಯಕ್, ಜಯವಿಕ್ರಮ್, ಜಗದೀಶ್ ಡಿ,ಎಸ್.ಸಿ ಘಟಕದ ಅಧ್ಯಕ್ಷರಾದ ಓಬಯ್ಯ ಆರಂಬೋಡಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ವಿನುತಾ ರಜತ್ ಗೌಡ, ಪ್ರಮುಖರಾದ ಸಂಜೀವ ಪೂಜಾರಿ ಕೊಡಂಗೆ, ಬಾಲಕೃಷ್ಣ ಶೆಟ್ಟಿ, ಚಿದಾನಂದ ಪೂಜಾರಿ, ಮಹಮ್ಮದ್ ಶಾಫಿ ಕಾಶಿಪಟ್ಣ, ಯಶೋಧ ಕುತ್ತೂರು, ನಾರಾಯಣ ಗೌಡ ದೇವಸ್ಯ, ಪುನಿತ್ ಮಡಂತ್ಯಾರು, ಸೆಲೆಸ್ಟಿನ್ ಡಿಸೋಜಾ, ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸದಸ್ಯರಾದ ವಂದನಾ ಕುಮಾರಿ, ಕೆ.ನೇಮಿರಾಜ ಕಿಲ್ಲೂರು, ಹಕೀಂ ಕೊಕ್ಕಡ, ಸೌಮ್ಯ ಲಾಯಿಲ, ವೀರಪ್ಪ ಮೊಯ್ಲಿ, ವಾಸುದೇವ ರಾವ್, ವಿಜಯ ಗೌಡ ಬೆಳಾಲು, ಸತೀಶ್ ಹೆಗ್ಡೆಅಬ್ದುಲ್ ಸಲಾಂ, ಮರಿಟಾ ಪಿಂಟೋ, ಶ್ರೀಪತಿ ಉಪಾಧ್ಯಾಯ, ಕೇಶವ ನಾಯ್‌ಯತೀಶ್, ಶರೀಫ್ ಶಬರಬೈಲು ಹಾಗೂ ಕಾಂಗ್ರೇಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿದರು.ತಾ.ಪಂ ಮ್ಯಾನೇಜರ್ ಪ್ರಶಾಂತ್ ಡಿ.ಬಳಂಜ, ಸಹಾಯಕ ಲೆಕ್ಕಧಿಕಾರಿ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.