ಬೆಳ್ತಂಗಡಿ-ಬಂಗಾಡಿ ವಲಯ ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟ: ಚರ್ಚ್ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ

0

ಕೊಯ್ಯೂರು: ದ.ಕ.ಜಿ.ಪ.ಹಿ.ಪ್ರಾ. ಶಾಲೆಯಲ್ಲಿ ನಡೆದ ಬೆಳ್ತಂಗಡಿ-ಬಂಗಾಡಿ ವಲಯ ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬೆಳ್ತಂಗಡಿ ಚರ್ಚ್ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನವನ್ನು ಪಡೆಯಿತು.

ಪಂದ್ಯಕೂಟದ ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಮುಫೀದಾ ಹಾಗೂ ಆಲ್ ರೌಂಡರ್ ಪ್ರಶಸ್ತಿಯನ್ನು ಗ್ರೀಷ್ಮಾ ಪಡೆದುಕೊಂಡರು.

ಶಾಲಾ ಶಿಕ್ಷಕರಾದ ಸಿದ್ದಪ್ಪ, ಮಂಜುನಾಥ್, ರೀಟಾ ಉಪಸ್ಥಿತರಿದ್ದರು.

ಮುಖ್ಯ ತರಬೇತುದಾರ ಸುರೇಶ್ ಆರ್.ಪಿ. ನೇತೃತ್ವದಲ್ಲಿ ತಂಡ ಜಯಗಳಿಸಲು ಪ್ರಮೋದ್, ಅನಿಲ್, ಸುದೀಪ್, ಸಂತೋಷ್, ಪ್ರತೀಕ್ ಹಾಗೂ ಪೋಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here