ಕಟ್ಟದಬೈಲು ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಕಟ್ಟದಬೈಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಗುರುವಾಯನಕೆರೆ ವಲಯದ ಕಟ್ಟದಬೈಲು ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟದಬೈಲು ಇಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿಯವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ನಿಕಟ ಪೂರ್ವ ಆಧ್ಯಕ್ಷ ಬಾಲಕೃಷ್ಣರವರು ವಹಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಗೌರವಾನ್ವಿತ ನಿರ್ದೇಶಕ ಮಹಾಬಲ ಕುಲಾಲ್ ರವರು ಗ್ರಾಮಭಿವೃದ್ಧಿ ಯೋಜನೆ ನಡೆದು ಬಂದ ದಾರಿ, ಇದರಿಂದ ಆದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹಾಗೂ ಅನುಷ್ಠಾನದ ಬಗ್ಗೆ ಮತ್ತು ಸಾಲ ಮರುಪಾವತಿಯಲ್ಲಿ ಇತರರ ಮಾತಿಗೆ ಕಿವಿಗೊಡದೆ ನಮ್ಮ ತಂಡದ ಸ್ಥಾನವನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು, ಯೋಜನೆಯ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಸವಿವಾರವಾದ ಮಾಹಿತಿ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಗೋಪಾಲ ಶೆಟ್ಟಿ, ಕೊರಿಯಾರ್, ಆಡಳಿತ ಮೊಕ್ತೇಸರರು, ಕಿರಾತ ಮೂರ್ತಿ ದೇವಸ್ಥಾನ ಮೈರಾಳಿಕೆ, ಶೇಖರ ಪಿಜತಕಾಡು, ಕಟ್ಟದಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಸತೀಶ್ ಆಚಾರ್ಯ, ವಲಯಧ್ಯಕ್ಷರು ಎಸ್ ಕೆ ಡಿ ಆರ್ ಡಿ ಪಿ ಗುರುವಾಯನಕೆರೆ ವಲಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಾದರಿ ಸ್ವ ಸಹಾಯ ಸಂಘ, ಮಾದರಿ ಪ್ರಗತಿ ಬಂಧು, ತಂಡದಲ್ಲಿರುವ 70 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಗುರುತಿಸಿ ಗೌರವಿಸಲಾಯ್ತು.

ಗೋಪಾಲ ಬಣ, ಸದಸ್ಯರು ವ್ಯವಸಾಯ ಸೇವಾ ಸಹಕಾರಿ ಸಂಘ ಗೇರುಕಟ್ಟೆ ಉಪಸ್ಥಿತರಿದ್ದರು.ಕುಮಾರಿ ನಿರೂಪಮ ಕಾರ್ಯಕ್ರಮ ನಿರೂಪಿಸಿದರು, ಡೀಕಮ್ಮ ಮತ್ತು ತಂಡದವರು ಪ್ರಾರ್ಥಿಸಿ, ವಲಯದ ಮೇಲ್ವಿಚಾರಕಿ ಯಶೋಧ ಸ್ವಾಗತಿಸಿ, ಸೇವಾ ಪ್ರತಿನಿಧಿ ಶರ್ಮಿಳಾ ಒಕ್ಕೂಟದ ಸಾಧನ ವರದಿ ಮಂಡನೆ ಮಾಡಿದರು.ಒಕ್ಕೂಟದ ಕಾರ್ಯದರ್ಶಿ ರೋಸ್ಲಿ ಧನ್ಯವಾದ ಮಾಡಿದರು.

LEAVE A REPLY

Please enter your comment!
Please enter your name here