ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಬಹುತೇಕ ಎಲ್ಲಾ ಚರ್ಚ್ ಗಳ ವಾರ್ಷಿಕ ಮಹೋತ್ಸವ, ಜಾತ್ರೆ ಹಾಗೂ ಸಾಮಾನ್ಯ ಎಲ್ಲಾ ಉತ್ಸವಗಳಲ್ಲಿನ ಬ್ಯಾಂಡ್ ಸೆಟ್ ವಾದ್ಯ ಘೋಷದ ಮೆರಗನ್ನು ನೀಡಿ ಜನ ಸಾಮಾನ್ಯರಿಗೆ ಸಂಗೀತ ರಸ ದೌತಣ ನೀಡುತ್ತಿದ್ದ ನೆರಿಯ ಗಂಡಿಬಾಗಿಲಿನ ಟಿ.ಎಕ್ಸ್. ಆಂಟನಿ (65ವ) ಅವರು ಸ್ವ-ಗೃಹದಲ್ಲಿ ಆ.19ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ನೆರಿಯ ಎ ವಲಯದ ಧರ್ಮಸ್ಧಳ ಗ್ರಾಮಾಭಿವೃಧಿ ಯೋಜನೆಯ ಒಕ್ಕೂಟದಲ್ಲಿ ಮಾಜಿ ಅಧ್ಯಕ್ಷರಾಗಿ ಹಾಗೂ ಶೌರ್ಯ ವಿಪತ್ತು ಘಟಕದಲ್ಲಿ ಸಕ್ರಿಯ ಸದಸ್ಯರಾಗಿ ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚ್ ನ ಬ್ಯಾಂಡ್ ಸೆಟ್ ಇದರ ಪ್ರಮುಖರಾಗಿ ತಂಡದ ಎಲ್ಲಾ ಸದಸ್ಯರಿಗೆ ತರಬೇತಿ ನೀಡುತ್ತಿದ್ದರು.ಧರ್ಮಸ್ಧಳ ಗ್ರಾಮಾಭಿವೃಧಿ ಯೋಜನೆಯ ಎಲ್ಲಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಧರ್ಮ ಪತ್ನಿ ಮೇರಿ ಟಿ.ಹೆಚ್. ಪುತ್ರ ಸಂತೋಷ್, ಪುತ್ರಿ ಸಂದ್ಯಾ ಅವರನ್ನು ಆಗಲಿದ್ದಾರೆ. ಅಂತಿಮ ಸಂಸ್ಕಾರ ನಾಳೆ 3 ಗಂಟೆ ಸೈಂಟ್ ತೋಮಸ್ ಗಂಡಿಬಾಗಿಲು ಚರ್ಚ್ ನಲ್ಲಿ ನಡೆಯಲಿದೆ.
ಇವರ ನಿಧನಕ್ಕೆ ಗಂಡಿ ಬಾಗಿಲು ಚರ್ಚ್ ನ ಮಾಜಿ ಧರ್ಮ ಗುರುಗಳು ಹಾಗೂ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂ.ಫಾ.ಶಾಜಿ ಮಾತ್ಯು, ಸೆಂಟ್ ತೋಮಸ್ ಗಂಡಿಬಾಗಿಲಿನ ವಂದನಿಯ ಫಾ.ಜೋಸ್ ಆಯಾಮ್ ಕುಡಿ, ಧರ್ಮೋಪದೇಶ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಎಸ್ರ ಫೌಂಡೇಶನ್ ನ ಶಿಜು ಚೇಟ್ಟು ತಡತ್ತಿಲ್, ಮರ್ವಿನ್ ಅಳವೂರ್ ವಿಲ್ಸನ್ ಎಡಯತ್ರತ್ತ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.