ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ನಿಂದ ವಿವಿಧ ರೀತಿಯಲ್ಲಿ ಸಹಕರಿಸಿದ ಮಹನೀಯರಿಗೆ ಸನ್ಮಾನ

0

ಬೆಳ್ತಂಗಡಿ: ಉಜಿರೆ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸುತ್ತಿರುವ ಮಹನೀಯರಾದ ಅಕ್ಷರ ಪ್ರಿಂಟರ್ಸ್ ಮಾಲಕ ಅನಿಲ್ ಕುಮಾರ್ ಶಿಬಾಜೆ, ಯೂಪ್ಲಸ್ ಚಾನೆಲ್ ಮುಖ್ಯಸ್ಥ ದಿನೇಶ್ ಕೋಟ್ಯಾನ್, ಪ್ರಮುಖರಾದ ರಾಘವೇಂದ್ರ ನಿಡಿಗಲ್ ರಶ್ಮಿ ಸ್ಟುಡಿಯೋ ಮಾಲಕ ರಾಮಕೃಷ್ಣ ರೈ, ಯಶೋಧರ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.

ಈ‌ ಸಂದರ್ಭದಲ್ಲಿ ಸಿರಿ ಸಂಸ್ಥೆಯ ವ್ಯವಸ್ಥಾಪನಾ ನಿರ್ದೇಶಕ ಕೆ.ಎಮ್, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ರಾಜೇಶ್ ಪೈ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಸುರಕ್ಷಾ ಮೆಡಿಕಲ್ ನ ಶ್ರೀಧರ್ ಕೆ.ವಿ, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here