ನಿಟ್ಟಡೆ: ಕುಂಭಶ್ರೀ ಶಾಲಾ- ಕಾಲೇಜು ಇಲ್ಲಿನ 78ನೇ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮವು ಧ್ವಜಾರೋಹಣದಿಂದ ಪ್ರಾರಂಭಗೊಂಡು, ಕೆ ರಾಜೇಂದ್ರ ಆಚಾರ್ಯ ಬಜಿರೆ ಧ್ವಜಾರೋಹಣ ನೆರವೇರಿಸಿದರು. ಕೆ ರಾಜೇಂದ್ರ ಆಚಾರ್ಯ ಕುಂಭಶ್ರೀ ವಿದ್ಯಾಸಂಸ್ಥೆಗೆ ವಾಟರ್ ಕೂಲರನ್ನು ದಾನವಾಗಿ ನೀಡಿರುತ್ತಾರೆ. ಇದನ್ನು ಈ ಸುಸಂದರ್ಭದಲ್ಲಿ ಶ್ರೀಶೈಲ್ ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಠಾಣೆ ವೇಣೂರು ಇವರು ವಾಟರ್ ಕೂಲರನ್ನು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೇಣೂರು ಪೋಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಆದ ಶ್ರೀಶೈಲ್ ಮುರ್ ಗೋಡು ಈ ವಿದ್ಯಾಸಂಸ್ಥೆಯು ಶಿಸ್ತಿಗೆ ಮತ್ತು ಸಂಸ್ಕಾರಕ್ಕೆ ಮಾದರಿಯಾಗಿದೆ. ಇಂತಹ ವಿದ್ಯಾ ಸಂಸ್ಥೆಯಲ್ಲಿ ಕಲಿತು ಮುಂದಕ್ಕೆ ಒಂದು ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನೀಡಿದರು. ಹಾಗೆಯೇ ಈ ಶಾಲೆಯು ಇನ್ನು ಮುಂದಕ್ಕೂ ಇದೇ ರೀತಿ ಮುಂದುವರಿಯಲಿ ಎಂದು ಶುಭ ಹಾರೈಸಿದರು. ದಾನಿಗಳಾದ ಕೆ ರಾಜೇಂದ್ರ ಆಚಾರ್ಯ ಮತ್ತು ಧರ್ಮಪತ್ನಿ ಕುಂಭಶ್ರೀ ವಿದ್ಯಾಸಂಸ್ಥೆಯ ಶಿಕ್ಷಕಿ ವಾಣಿ ಆರ್ ಇವರಿಗೆ ಸನ್ಮಾನಿಸಲಾಯಿತು. ಸನ್ಮಾನಿತಗೊಂಡ ಕೆ ರಾಜೇಂದ್ರ ಆಚಾರ್ಯ ಸಭೆಯನ್ನು ಉದ್ದೇಶಿಸಿ ಇಂತಹ ವಿದ್ಯಾಸಂಸ್ಥೆ ಈ ಹಳ್ಳಿ ಪ್ರದೇಶದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ಇಲ್ಲಿನ ಶಿಸ್ತು ಮತ್ತು ಶಿಕ್ಷಣವೇ ಕಾರಣ ಜೀವನದಲ್ಲಿ ಶಿಕ್ಷಣ ಎಷ್ಟು ಅಗತ್ಯವೋ ಅಷ್ಟೇ ಶಿಸ್ತು ಕೂಡ ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕುಂಭಶ್ರೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಿರೀಶ್ ಕೆ.ಎಚ್. ಮತ್ತು ಶಾಲಾ ಸಂಚಾಲಕ ಅಶ್ವಿತ್ ಕುಲಾಲ್, ಡಾಕ್ಟರ್ ದೀಕ್ಷಾ ಕುಲಾಲ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಜಾತ, ಕುಂಭಶ್ರೀ ವೈಭವ ಸಮಿತಿಯ ಮಾಜಿ ಅಧ್ಯಕ್ಷ ಹರೀಶ್ ಪೊಕ್ಕಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ವಸಂತ, ಶಿಕ್ಷಕ ರಕ್ಷಕ ಸಂಘದ ಎಲ್ಲಾ ಪದಾಧಿಕಾರಿಗಳು, ಎಲ್ಲಾ ಸದಸ್ಯರು ಮತ್ತು ಎಲ್ಲಾ ಮುಖ್ಯೋಪಾಧ್ಯಾಯಿನಿಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿ ಸ್ವರ್ಣ ಲತಾ ಮತ್ತು ಉಪನ್ಯಾಸಕಿ ಕುಮಾರಿ ಪ್ರಜ್ಞ ನಿರೂಪಿಸಿ, ಕಾಲೇಜಿನ ಉಪನ್ಯಾಸಕ ವಿನಯ್ ಸ್ವಾಗತಿಸಿ, ಪ್ರೌಢಶಾಲಾ ಉಪಮುಖ್ಯ ಶಿಕ್ಷಕಿ ಮಮತಾ ಶಾಂತಿ ವಂದಿಸಿದರು.