ನೆರಿಯ: ಬದ್ರಿಯ ಜುಮ್ಮಾ ಮಸೀದಿ ಕೆ.ಎಮ್.ಜೆ, ಎಸ್.ವೈ.ಎಸ್, ಎಸ್.ಎಸ್.ಎಫ್, ನೆರಿಯ ಇದರ ಆಶ್ರಯದಲ್ಲಿ ಸಂಭ್ರಮದ ಸ್ವಾತಂತ್ರ್ಯ ಆಚರಣೆ ನಡೆಯಿತು. ದ್ವಜಾರೋಹಣವನ್ನು ಬದ್ರಿಯ ಜುಮ್ಮಾ ಮಸೀದಿಯ ಅಧ್ಯಕ್ಷ ಮೂಸೆ ಕುಂಞ ಬಲಿಪಾಯ ನೇರವೇರಿಸಿದರು.
ನೆರಿಯ ಬದ್ರಿಯ ಜುಮ್ಮಾ ಮಸೀದಿ ಆಡಳಿತ ಕಮೀಟಿ ಅಧ್ಯಕ್ಷ ಮೂಸೆ ಕುಂಞ ಬಲಿಪಾಯ ಅದ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ರಾತ್ರಿ ಹಗಲೆನ್ನದೆ ಸೇವೆ ಮಾಡುತ್ತಿರುವ ವಿದ್ಯುತ್ ಪವರ್ ಮ್ಯಾನ್ ಗಳಾದ ಉಮೇಶ್, ನಾಗೇಶ್ ಸಹಾಯಕ ಹಾಗೂ ಗ್ರಾ ಪಂ ಸಿಬ್ಬಂದಿ ಪಂಪ್ ನಿರ್ವಾಹಕ ಮುತ್ತಲಿಬ್ ಅವರಿಗೆ ಗೌರವ ಸಮರ್ಪಣೆ ನಡೆಯಿತು.
ಸಭೆಯಲ್ಲಿ ಆಡಳಿತ ಕಮೀಟಿ ಪ್ರಧಾನ ಕಾರ್ಯದರ್ಶಿ ನೂರುದ್ದೀನ್, ಗ್ರಾಮ ಪಂಚಾಯತಿ ಸದಸ್ಯ ಮಹಮ್ಮದ್ ಬಲಿಪಾಯ, ಕೆ.ಎಮ್.ಜೆ ಅಧ್ಯಕ್ಷ ಯಾಕುಬ್, ಎಸ್.ವೈ.ಎಸ್ ಅದ್ಯಕ್ಷ ಇಬ್ರಾಹಿಂ,ಎಸ್.ಎಸ್.ಎಫ್ ಅದ್ಯಕ್ಷ ಹಕೀಂ, ಹಿರಿಯರಾದ ನಾಟಿ ವೈದ್ಯ ಇಬ್ರಾಹಿಮ್ ಪರಪ್ಪು, ಹಸನಬ್ಬ, ಅಬುಬಕ್ಕರ ಮುಸ್ಲಿಯಾರ್, ಪಿಲಿಕಲ ಸದರ್ ಮುಅಲ್ಲಿಮ್ ಅಬ್ದುಲ್ ರಝಾಕ್ ಮುಸ್ಲಿಯಾರ್, ಎಸ್.ವೈ.ಎಸ್ ಕೋಶಾಧಿಕಾರಿ ಹನೀಫ್ ಬ್ರಾಂದಿಕೋಡಿ ಹಾಗೂ ಎಲ್ಲಾ ಸಮಿತಿಯ ಪದಾಧಿಕಾರಿಗಳು, ಜಮಾಅತ್ ಸದಸ್ಯರು ಊರಿನ ಗಣ್ಯರು ಉಪಸ್ಥಿತರಿದ್ದರು.
ಸದರ್ ಮಅಲ್ಲಿಮ್ ಅಬ್ದುಲ್ ರಶೀದ್ ಮದನಿ ಸ್ವಾಗತಿಸಿ, ಮಸೀದಿ ಖತೀಬರಾದ ಮಹಮ್ಮದ್ ಶರ್ವಾನಿ ರಝ್ವಿ ಅಲ್ ಫುರ್ಖಾನಿ ಪ್ರಾಸ್ತಾವಿಕ ಬಾಷಣ ಮಾಡಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮದರಸ ಮಕ್ಕಳ ಕಾರ್ಯಕ್ರಮ ನಡೆಸಿ ಸಿಹಿ ತಿಂಡಿ ವಿತರಿಸಲಾಯಿತು.