ಪತ್ರಿಕಾಗೋಷ್ಠಿ- ಆ.17: ಅಂತಾರಾಷ್ಟ್ರೀಯ ವಿದ್ವಾಂಸ ಎ.ಪಿ ಉಸ್ತಾದ್ ರಿಂದ ಖಾಝಿ ಸ್ವೀಕಾರ, ಕೂರತ್ ತಂಙಳ್ ಅನುಸ್ಮರಣೆ

0

ಬೆಳ್ತಂಗಡಿ: ಪರಂಪರಾಗತ ಇಸ್ಲಾಮಿನ ಆಚಾರಗಳನ್ನು ಅನುಷ್ಟಾನಕ್ಕೆ ತರುವ ವ್ಯವಸ್ಥೆಯಾಗಿರುವ ಖಾಝಿ ಪದ್ಧತಿಯು ಇಸ್ಲಾಂ ಧರ್ಮದ ಪ್ರಮುಖವಾದ ಭಾಗವಾಗಿದೆ.ಅದಕ್ಕಾಗಿ ಆಯಾ ಮೊಹಲ್ಲಾ ಜಮಾಅತ್ ಖಾಝಿಯವರನ್ನು ತಮ್ಮ ಮೊಹಲ್ಲಾದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ನಾಯಕತ್ವ ನೀಡಲು ಅವರನ್ನು ಆಯ್ಕೆ ಮಾಡಿ ಅವರಿಂದ ಅದನ್ನು ಅಂಗೀಕರಿಸಿ ಸ್ವೀಕರಿಸುವುದು ಇಸ್ಲಾಂ ಧರ್ಮದ ಆಚಾರವಾಗಿದೆ.

ಅದರಂತೆ ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ನೇತೃತ್ವದಲ್ಲಿ 80ರಷ್ಟು ಮೊಹಲ್ಲಾದ ಖಾಝಿಯಾಗಿ ಅಂತರ್ ರಾಷ್ಟ್ರೀಯ ವಿದ್ವಾಂಸ, ಹಲವಾರು ಶೈಕ್ಷಣಿಕ ಸಮುಚ್ಚಯಗಳ ನಿರ್ಮಾಪಕ, ಸಂಘ ಸಂಸ್ಥೆಗಳ ಸ್ಥಾಪಕ, ಕೇರಳ, ಕರ್ನಾಟಕದ ನೂರಾರು ಮೊಹಲ್ಲಾಗಳ ಖಾಝಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ರವರನ್ನು ಆಯ್ಕೆ ಮಾಡಲಾಗಿದೆ.
ಅವರನ್ನು ಖಾಝಿಯಾಗಿ ಮೊಹಲ್ಲಾಗಳು ಸ್ವೀಕರಿಸುವ ಸಮಾರಂಭ ಆ.17ರಂದು ಗುರುವಾಯನಕೆರೆ ಸಮೀಪದ ಎಫ್ ಎಂ ಗಾರ್ಡನ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ಸುನ್ನಿ ಸಂಯುಕ್ತ ಜಮಾತ್ ಅಧ್ಯಕ್ಷ ಸಯ್ಯದ್ ಇಸ್ಮಾಯಿಲ್ ತಂಜಳ್ ಹೇಳಿದರು.ಅವರು ಆ.14ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಖಾಝಿಯಾಗಿ ಅಧಿಕಾರ ಸ್ವೀಕರಿಸುವ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ 2009 ರಲ್ಲಿ ಪ್ರತಿಷ್ಠಿತ ಜಾರ್ಜ್ ಟೌನ್ ಯುನಿವರ್ಸಿಟಿ ಪ್ರಕಟಿಸಿದ ವಿಶ್ವದ ಅತಿ ಪ್ರಭಾವಿಗಳಾದ 500 ಮಂದಿಯ ಪಟ್ಟಿಯಲ್ಲಿ ಭಾರತದಿಂದ ಆಯ್ಕೆಯಾದ ಏಕೈಕ ವ್ಯಕ್ತಿಯಾಗಿದ್ದಾರೆ. ಅವರು ಈಗಾಗಲೇ ದೇಶ ವಿದೇಶಗಳಲ್ಲಿ ನಡೆದ ಹಲವು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಹಲವು ದೇಶಗಳ ರಾಜರು, ರಾಷ್ಟ್ರಪತಿಗಳು, ಅಧ್ಯಕ್ಷರುಗಳು, ಪ್ರಧಾನ ಮಂತ್ರಿಗಳು, ಶೈಕ್ಷಣಿಕ ಸಾಮಾಜಿಕ ರಾಜಕೀಯ ಮುಖಂಡರು, ಧಾರ್ಮಿಕ ವಿದ್ವಾಂಸರನ್ನು ಭೇಟಿ ಮಾಡಿದ್ದಾರೆ. ಭಾರತದ ಹಲವು ಪ್ರಧಾನ ಮಂತ್ರಿಗಳನ್ನು ವಿವಿಧ ಸಂದರ್ಭಗಳಲ್ಲಿ ಭೇಟಿ ಮಾಡಿ ಮುಸ್ಲಿಂ ಸಮಾಜದ ಬೇಡಿಕೆಗಳನ್ನು ಅವರ ಮುಂದಿಟ್ಟು ಪರಿಹಾರಕ್ಕೆ ಪ್ರಯತ್ನಿಸಿದ್ದಾರೆ.

ಮನುಷ್ಯ ಮನಸ್ಸುಗಳನ್ನು ಜೋಡಿಸುವ ಕೇರಳ ಯಾತ್ರೆಯನ್ನು 2 ಬಾರಿ 2014ರಲ್ಲಿ ಗುಲ್ಬರ್ಗಾದಿಂದ ಮಂಗಳೂರಿನ ತನಕ ಕರ್ನಾಟಕ ಯಾತ್ರೆ ನಡೆಸಿದ್ದಾರೆ.ಅವಿರತವಾಗಿ ಧರ್ಮದ ಸೇವೆಯಲ್ಲಿ ದಣಿವರಿಯದ ನಾಯಕರಾದ ಎ.ಪಿ ಉಸ್ತಾದರು, ಈಗಾಗಲೇ ಕೇರಳ, ಬೆಂಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಸಹಿತ ನೂರಾರು ಮೊಹಲ್ಲಾಗಳ ಗೌರವಾನ್ವಿತ ಖಾಝಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನ್ನೀ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ, ವಹಿಸಲಿದ್ದು, ಕರ್ನಾಟಕ ಸುನ್ನೀ ಜಂ ಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರಾದ ಖಾಝಿ ಝೈನುಲ್ ಉಲಮಾ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಸಭೆಯನ್ನು ಉದ್ಘಾಟಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ಕೋಶಾಧಿಕಾರಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಉಲ್ತೂರು ಪ್ರಾಸ್ತಾವಿಕ ಭಾಷಣ ಹಾಗೂ ಮುಖ್ಯ ಭಾಷಣ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಮಾಡಲಿದ್ದಾರೆ.

ಸಯ್ಯಿದ್ ಕಾಜೂರು ತಂಙಳ್, ಮಲ್ಜಅ’ ತಂಙಳ್, ಮನ್ಶರ್ ತಂಙಳ್, ಎಸ್ ಎಂ ಕೋಯ ತಂಙಳ್ ಉಜಿರೆ, ಸಬರಬೈಲು ತಂಙಳ್, ಕಾವಳಕಟ್ಟೆ ಹಝ್ರತ್, ಕೃಷ್ಣಾಪುರ ಖಾಝಿ, ಪೊಮ್ಮಾಜೆ ತಂಙಳ್, ಕರ್ಪಾಡಿ ತಂಙಳ್, ಹೈದರ್ ಮದನಿ, ಕಾಸಿಂ ಮದನಿ, ಅಬೂಸ್ವಾಲಿಹ್ ಮುಸ್ಲಿಯಾರ್, ಅಬೂಸುಫಿಯಾನ್ ಮದನಿ, ಝೈನಿ ಕಾಮಿಲ್ ಸಖಾಫಿ, ಶಾಫೀ ಸಅದಿ, ಎಸ್ಪಿ ಹಂಝ ಸಖಾಫಿ,ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಪಿಪಿ ಅಹ್ಮದ್ ಸಖಾಫಿ, ಪಿ ಕೆ ಮುಹಮ್ಮದ್ ಮದನಿ.ಆದಂ ಅಹ್ಸನಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿಸುನ್ನಿ ಸಂಯುಕ್ತ ಜಮಾತ್ ಪ್ರಧಾನ ಕಾರ್ಯದರ್ಶಿ ಅಲ್ಲಾಜ್ ಅಬ್ದುಲ್ ರಝಕ್ ಸಖಾಫಿ ಮಡಂತ್ಯಾರು, ಕಾರ್ಯಾಧ್ಯಕ್ಷ ಅಶ್ರಫ್ ಸಖಾಫಿ ಮಾಡಾವು, ಉಪಾಧ್ಯರುಗಳಾದ ಅಬ್ಬಾಸ್ ಬಟ್ಲಡ್ಕ, ಕಾಸಿಂ ಪದ್ಮುಂಜ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here