ಮುಂಡಾಜೆ: ಗ್ರಾಮದ ಕೂಳೂರು ನಿವಾಸಿ, ಹಿರಿಯ ಮೇಸ್ತ್ರಿಗಳು ಹಾಗೂ ಧರ್ಮಬಂಧುವಾಗಿದ್ದ ಪುತ್ತಾಕ ಕೂಳೂರು (78ವ) ಅವರು ಅಲ್ಪಕಾಲದ ಅಸೌಖ್ಯದಿಂದ ಆ.12ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪಾರ್ಶ್ವ ವಾಯು ಪೀಡಿತರಾಗಿದ್ದ ಅವರು ಹಲವು ವರ್ಷಗಳಿಂದ ವಿಶ್ರಾಂತಿಯಲ್ಲೇ ಇದ್ದರಾದರೂ ರವಿವಾರ ಹಠಾತ್ ಹೃದಯ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಕೊನೆಯುಸಿರೆಳೆದರು.
ಮರ್‌ಹೂಮ್ ಕಾಜೂರು ಜಮಲುಲ್ಲೈಲಿ ತಂಙಳ್ ಅವರ ಅನೇಕ ವರ್ಷ ನಿಕಟವರ್ತಿ ಮತ್ತು ಸೇವಕರಾಗಿದ್ದ ಅವರು ಮುಂಡಾಜೆ “ಮಸ್ಲಕ್” ಸಮಿತಿಯ ಸ್ಥಾಪಕಲ್ಲೊರ್ವರು ಹಾಗೂ ಪ್ರಸ್ತುತ ಸಂಚಾಲಕರಾಗಿದ್ದರು. ಕೃಷಿಕರಾಗಿದ್ದ ಅವರು ಕನ್ಯಾಡಿ 2 ಇಲ್ಲಿ ಕೃಷಿ ತೋಟದ ಮೇಲ್ವಿಚಾರಕರಾಗಿ ದೀರ್ಘ ವರ್ಷ ಸೇವೆ ಸಲ್ಲಿಸಿದ್ದರು.
ಬದ್ರಿಯಾ ಜುಮ್ಮಾ ಮಸ್ಜಿದ್ ಸೋಮಂತಡ್ಕ ಇದರ ಆಡಳಿತ ಸಮಿತಿಯಲ್ಲೂ ಹಲವು ವರ್ಷ ಸೇವೆ ಸಲ್ಲಿಸಿದ್ದು ಮಸೀದಿಯ ಆರಂಭಿಕ ದಾಖಲೆ ಪತ್ರ ಗಳು ಸರಿಪಡಿಸುವಲ್ಲಿ ತಮ್ಮ ಸೇವೆ ನೀಡಿದ್ದರು.ಮೃತರು ಪತ್ನಿ, ಐವರು ಗಂಡು ಮಕ್ಕಳು, ಓರ್ವ ಹೆಣ್ಣು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.