ಗುರುವಾಯನಕೆರೆ: ಸಾಯಿರಾಮ್ ಫ್ರೆಂಡ್ಸ್ ವತಿಯಿಂದ ಕೆಸರ್ ಡೊಂಜಿ ದಿನ- ಕೆಸರಿನಲ್ಲಿ ಕುಣಿದು ಕುಪ್ಪಳಿಸಿದ ಮಕ್ಕಳು, ಗ್ರಾಮಸ್ಥರು- ಸುದ್ದಿ ಚಾನೆಲ್ ನಲ್ಲಿ ನೇರಪ್ರಸಾರ- 11ಸಾವಿರಕ್ಕೂ ಅಧಿಕ ವೀಕ್ಷಣೆ

0

ಗುರುವಾಯನಕೆರೆ: ಇಲ್ಲಿನ ಶಕ್ತಿನಗರದ ಸುಧೆಕ್ಕಾರ್ ಗದ್ದೆಯಲ್ಲಿ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ವತಿಯಿಂದ ಮೂರನೇ ವರ್ಷದ ಕೆಸರ್ ಡೊಂಜಿ ದಿನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕುವೆಟ್ಟು, ಓಡಿಲ್ನಾಳ, ತೆಂಕಕಾರಂದೂರು, ಮುಂಡ್ಕೂರು, ಮೇಲಂತಬೆಟ್ಟು ಗ್ರಾಮಗಳ ಹಿಂದೂಬಾಂಧವರಿಗೆ ಆ.11ರಂದು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ರಾಕೇಶ್ ಹೆಗ್ಡೆ ಬಳಂಜ ನೆರವೇರಿಸಿದರು. ಕೊಡಮಣಿತ್ತಾಯ ದೇವಸ್ಥಾನ ಅರಮಲೆಬೆಟ್ಟದ ಆಡಳಿತ ಮೋಕ್ತೇಸರರಾದ ಸುಖೇಶ್ ಕುಮಾರ್ ಕಡಂಬು, ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ,ಕುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕುಲಾಲ್, ಎಸ್ ಡಿ ಎಂ ಕೈಗಾರಿಕಾ ತರಬೇತಿ ಕೇಂದ್ರ ವೇಣೂರಿನ ಉಪನ್ಯಾಸಕ ರಾಮಚಂದ್ರ ಶೆಟ್ಟಿ ಪಾಡ್ಯಾರು, ಶಾಂತೇಶ್ವರ ಫ್ಯೂಯಲ್ಸ್ ನ ಮಾಲಕ ಲಾಲ್ ಚಂದ್ರ ಭಂಗ ಬರಾಯ, ಗುರುವಾಯನಕೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ವಡಿವೇಲು, ಉದ್ಯಮಿ ಚಿದಾನಂದ ಇಡ್ಯ, ಗ್ರಾಮ ಪಂಚಾಯತ್ ಬಳಂಜದ ಅಧ್ಯಕ್ಷರಾದ ಶೋಭಾ ಕುಲಾಲ್, ಗ್ರಾಮ ಪಂಚಾಯತ್ ಓಡಿಲ್ನಾಳದ ಸದಸ್ಯರುಗಳಾದ ಲಕ್ಷ್ಮೀಕಾಂತ್, ನಿತೇಶ್ ಶೆಟ್ಟಿ, ಸದಾನಂದ ಮೂಲ್ಯ, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಮುಂಡೂರು,ದೀಪಿಕಾ ಯೋಗೀಶ್, ಸಮೃದ್ಧಿ ಮದ್ದಡ್ಕ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ವಿವೇಕಾನಂದ ಸಾಲ್ಯಾನ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗಿಯಾದ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಸಮೃದ್ಧಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಶೆಟ್ಟಿ ಕೊರ್ಯಾರು, ಉದ್ಯಮಿ ಶಮಂತ್ ಕುಮಾರ್ ಜೈನ್, ಓಡಿಲು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪುರಂದರ ಶೆಟ್ಟಿ ಪಾಡ್ಯಾರ್, ಉದ್ಯಮಿಗಳಾದ ಸುನೀಶ್ ಕುಮಾರ್ ಜೈನ್, ವಾಮನ ಆಚಾರ್ಯ ಪಿಲಿಚಾಮುಂಡಿಕಲ್ಲು, ವಿಜಯ ಶೆಟ್ಟಿ ಸುದೇಕಾರು, ಬಿಜೆಪಿ ಮಹಾಶಕ್ತಿ ಕೇಂದ್ರ ಕುವೆಟ್ಟು ಇದರ ಅಧ್ಯಕ್ಷರಾದ ಚಂದ್ರಕಾಂತ್ ಗೌಡ ನಿಡ್ಡಾಜೆ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಚಂದ್ರಹಾಸ್ ದಾಸ್, ಉದ್ಯಮಿ ಪ್ರೇಮ್ ಶೆಟ್ಟಿ, ಸಂತೋಷ್ ಕುಲಾಲ್, ಪ್ರಶಾಂತ್ ಸಾಲಿಯಾನ್ ಕಾರ್ಯಕ್ರಮದಲ್ಲಿ ಭಾಗಿಯಾದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಗೆ 100 ಮೀಟರ್ ಓಟ, ಬಾಲ್ ಪಾಸಿಂಗ್, ಶಾಲಾ ವಿದ್ಯಾರ್ಥಿಗಳಿಗೆ 100 ಮೀಟರ್ ಓಟ, ಲಿಂಬೆ ಚಮಚ, ಹಾಳೆ ಓಟ ಸ್ಪರ್ಧೆಗಳು ನಡೆದು ಮಕ್ಕಳು ಅತ್ಯುತ್ಸಾಹದಿಂದ ಭಾಗಿಯಾದರು. ಮಹಿಳೆಯರಿಗೆ ನಡೆದ ಥ್ರೋಬಾಲ್ , ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಬಾಲಕರಿಗೆ ಕಂಬಳ ಓಟ ಮತ್ತು ಕಂಬ ಸುತ್ತುವ ಓಟ ಸ್ಪರ್ಧೆಗಳು ನೆರೆದವರ ಮನಸೂರೆಗೊಂಡವು.ಪುರುಷರ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ ಅಡ್ಡಕಂಬ ಸ್ಪರ್ಧೆಗಳು ಜಿದ್ದಾಜಿದ್ದಿನಿಂದ ಕೂಡಿದ್ದು ಭಾನುವಾರವನ್ನು ಸೂಪರ್ ಸಂಡೆಯನ್ನಾಗಿಸಿತು. ಹೀಗೆ, ಸಾಯಿರಾಮ್ ಫ್ರೆಂಡ್ಸ್ ಆಯೋಜಿಸಿದ್ದ ಕೆಸರ್ ಡೊಂಜಿ ದಿನ ಅದ್ಧೂರಿಯಾಗಿ ನಡೆದು ವೈಭವದ ತೆರೆಕಂಡಿತು.

ಶಕ್ತಿನಗರದ ಕೆಸರ್ ಡೊಂಜಿ ದಿನ ಕಾರ್ಯಕ್ರಮದ ನೇರಪ್ರಸಾರವನ್ನು ಸುದ್ದಿ ನ್ಯೂಸ್ ಬೆಳ್ತಂಗಡಿ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಯಿತು. ಈ ಪೂರ್ತಿ ದಿನದ ಕಾರ್ಯಕ್ರಮವನ್ನು 11,000ಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here