ಮಚ್ಚಿನ: ಗ್ರಾಮ ಪಂಚಾಯತ್ ಗ್ರಾಮ ಸಭೆ

0

ಮಚ್ಚಿನ: ಮಚ್ಚಿನ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಇವರ ಅದ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಮುದಾಯ ಸಭಾ ಭವನದಲ್ಲಿ ಆ.14ರಂದು ಜರಗಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಪಶು ಇಲಾಖೆಯ ವೈದ್ಯಾಧಿಕಾರಿ ಡಾ.ವಿನಯ್ ಭಾಗವಹಿಸಿ ಸಭೆಯನ್ನು ನಡೆಸಿಕೊಟ್ಟರು. ಸಭೆಯಲ್ಲಿ ಉಪಾಧ್ಯಕ್ಷರಾಗಿ ಸೋಮಾವತಿ, ಸದಸ್ಯರಾದ ಚಂದ್ರಕಾಂತ್ ನಿಡ್ಡಾಜೆ, ಚಂದ್ರಶೇಖರ್ ಬಿ. ಎಸ್., ಪ್ರತಿಭಾ ಬಿ. ರೈ, ಡಿಕಮ್ಮ, ಪ್ರಮೋದ್ ಕುಮಾರ್, ಜಯಶ್ರೀ, ವಿಶ್ವರಾಜ್, ಕೆ.ರವಿಚಂದ್ರ, ರಮ್ಯಾಶ್ರೀ ಕೆ., ತಾರಾ ಎಂ., ಚೇತನ್, ಶುಭಕರ, ವಿವಿಧ ಇಲಾಖಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಗ್ರಾಮಸ್ಥರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ಹೆಚ್. ಎಸ್.ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಂಜೀವ ವಿ. ಜಮಾ ಖರ್ಚಿನ ವಿವರ ಅನುಪಾಲನಾ ವರದಿ ಮಂಡಿಸಿದರು. ಸದಸ್ಯ ಚಂದ್ರ ಶೇಖರ್ ಸ್ವಾಗತಿಸಿದರು. ಗ್ರಾಮ ಸಭೆಯಲ್ಲಿ ತಾಲೂಕಿನ ಇಲಾಖಾಧಿಕಾರಿಗಳು ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here