ಕನ್ಯಾಡಿ-1: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತತ ಎಂಟು ವರ್ಷಗಳಿಂದ ಸ್ಥಳೀಯವಾಗಿ ಆಚರಿಸುವ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯನ್ನು ಕಲ್ಪವೃಕ್ಷದ ಎಲೆಗಳಿಂದ ಸಿಂಗರಿಸಿ, ವಿದ್ಯಾರ್ಥಿಗಳು ತುಳು ಹಾಡಿಗೆ ನೃತ್ಯಗಳನ್ನು ಮಾಡಿದರು.
ಹುಲಿ ವೇಷ, ಕೋಲಾಟ, ಜಾನಪದ, ವೇಷ ಭೂಷಣ ಪ್ರದರ್ಶನ, ಆಟಿಕಳಂಜ, ನಾನಾ ಬಗೆಯಲ್ಲಿ ಸಂಸ್ಕೃತಿಯ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮಕ್ಕೆ ಗ್ರಾಮಸ್ಥ ನಾಭಿರಾಜ ಜೈನ್ ಸ್ಥಳೀಯವಾಗಿ ಸೇವಾ ಕೈಂಕರ್ಯ ಹಾಗೂ ಶಾಲೆಯಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದಕ್ಕಾಗಿ ಮೆಚ್ಚಿ ಸನ್ಮಾನಿಸಲಾಯಿತು.
ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಜಗದೀಶ್ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮದ ಕುರಿತು ಮಾತನಾಡಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ನೋಣಯ್ಯ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಮುನಿರಾಜ್ ಅಜ್ರಿ ಆಗಮಿಸಿದ್ದರು.ಪಂಚಾಯತ್ ಸದಸ್ಯರಾಗಿರುವ ಪ್ರವೀಣ್ ವಿ ಜಿ, ಶಶಿಕಲಾ ಜೈನ್ ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಪ್ರಧಾನ ಗುರುಗಳಾಗಿರುವ ಹನುಮಂತರಾಯ ಮತ್ತು ಶಿಕ್ಷಕ ಬಳಗ ಕಾರ್ಯಕ್ರಮ ನಿರ್ವಹಿಸಿದರು.
ಶಾಲೆಯ ಪ್ರಮುಖ ಯೋಜನೆಯಾದ ವಿದ್ಯಾನಿಧಿ ಯೋಜನೆಗೆ ಒಂದನೇ ತರಗತಿಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ತಲಾ ಒಂದು ಸಾವಿರ ರೂಪಾಯಿ ಬಾಂಡನ್ನು ಮಕ್ಕಳಿಗೆ ಹಸ್ತಾಂತರಿಸಲಾಯಿತು. ವಿದ್ಯಾನಿಧಿ ಯೋಜನೆಗೆ ಬೇಕಾಗುವ ಮೊತ್ತವನ್ನು ಕನ್ಯಾಡಿಯ ನಾಭಿರಾಜ್ ಜೈನ್ ಇವರು ನೀಡಿ ಸಹಕರಿಸಿದರು.
ವಿದ್ಯಾನಿಧಿ ಯೋಜನೆಗೆ ಪೂರಕವೆಂಬಂತೆ ಶಾಲೆಯ ಅಕೌಂಟ್ ಸ್ಕ್ಯಾನರ್ ಬಿಡುಗಡೆಯನ್ನು ಮಾಡಲಾಯಿತು ಹಾಗೂ ವೇದಿಕೆಯಲ್ಲಿರುವ ಗಣ್ಯರು ವಿದ್ಯಾನಿಧಿ ಯೋಜನೆಗೆ ದೇಣಿಗೆಯನ್ನು ನೀಡಿದರು.
ಈ ಕಾರ್ಯಕ್ರಮವನ್ನು ವಿಕಾಸ್ ಕುಮಾರ್ ಇವರು ನಡೆಸಿಕೊಟ್ಟರು. ಸಹಶಿಕ್ಷಕಿ ಶ್ರೀದೇವಿ ಕತ್ತಿ ಸ್ವಾಗತಿಸಿದರು. ಶಿಕ್ಷಕಿ ಪ್ರಮೀಳಾ ಮತ್ತು ಪವಿತ್ರ ಇವರು ಕಾರ್ಯಕ್ರಮ ನಿರೂಪಿಸಿದರು.ಹರಿತ ಅತಿಥಿ ಪರಿಚಯ ಮಾಡಿದರು.ನಿಶ್ಮಿತ ವಂದನಾರ್ಪಣೆಗೈದರು.