ಅಗ್ರಿಲೀಫ್ ಸಂಸ್ಥೆಯಲ್ಲಿ ವಿಪುಲ ಉದ್ಯೋಗ ಅವಕಾಶ- ಆ.18ರಂದು ಉಜಿರೆ ಒಷ್ಯನ್ ಪರ್ಲ್ ಹೋಟೆಲ್ ನಲ್ಲಿ ನಡೆಯಲಿದೆ- ಬೃಹತ್ ಉದ್ಯೋಗ ಮೇಳ

0

ನಿಡ್ಲೆ: ಅಗ್ರಿಲೀಫ್ ಸಂಸ್ಥೆ ಜೈವಿಕ ವಿಘಟನೀಯ ಮತ್ತು ವಿವಿಧ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಭಾರತದ ಮೊಟ್ಟ ಮೊದಲ ನಂಬರ್ ಒನ್ ಸಂಸ್ಥೆಯಾಗಿದ್ದು, ಇಲ್ಲಿ ತಯಾರಾಗುವ ನವೀನ ಮಾದರಿಯ ಪರಿಸರ ಸ್ನೇಹಿ ಉತ್ಪನ್ನಗಳು ಜಗತ್ತಿನ ನಾನಾ ದೇಶಗಳ ಗಮನ ಸೆಳೆಯುತ್ತಿದ್ದೂ ಅಮೇರಿಕಾ, ಜಪಾನ್, ಜರ್ಮನಿ ಇನ್ನೂ ಹತ್ತು ಹಲವು ದೇಶಗಳು ಇಲ್ಲಿನ ಉತ್ಪನ್ನಗಳನ್ನು ಆಮದು ಕೂಡ ಮಾಡಿಕೊಳ್ಳುತ್ತಿದೆ.

ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹುಟ್ಟಿಕೊಂಡ ಈ ಸಂಸ್ಥೆಯಲ್ಲಿ ಉದ್ಯೋಗಕ್ಕೆ ವಿಪುಲ ಅವಕಾಶವಿದ್ದು ತಮ್ಮ ತಮ್ಮ ಊರಿನಲ್ಲಿ ಬಂದು ಉದ್ಯೋಗ ಮಾಡುವವರಿಗೆ ಒಂದು ಉನ್ನತ ಮಟ್ಟದ ಅವಕಾಶವಾಗಿದೆ.
ಉದ್ಯೋಗದ ವಿವರ:
ಫೈನಾನ್ಸ್ ಹೆಡ್, ಹೆಚ್ ಆರ್ ಹೆಡ್, ಮಾರ್ಕೆಟಿಂಗ್ ಮ್ಯಾನೇಜರ್, ಅಕೌಂಟ್ ಎಕ್ಸಿಕ್ಯೂಟಿವ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಇನ್ಸೈಡ್ ಸೇಲ್ಸ್ ಎಕ್ಸಿಕ್ಯೂಟಿವ್, ಎಕ್ಸಿಕ್ಯೂಟಿವ್ ಅಸಿಸ್ಟೆಂಟ್, ಅಡ್ಮಿನ್, ಜಾವಾ ಸಾಫ್ಟ್ವೇರ್ ಆರ್ಚಿಟೆಕ್ಟ್, ಸೂಪರ್ ವೈಸರ್, ಮೆಕ್ಯಾನಿಕಲ್ ಅಂಡ್ ಡಿಸೈನ್ ಇಂಜಿನಿಯರ್, ವೇರ್ ಹೌಸ್ ಇನ್ ಚಾರ್ಜ್, ವಿ.ಎಮ್.ಸಿ ಆಪರೇಟರ್, ಎಲೆಕ್ಟ್ರಿಷಿಯನ್ಸ್, ವೆಲ್ಡರ್, ಫಿಟ್ಟರ್ ಮೊದಲಾದ ವಿಭಾಗದಲ್ಲಿ ಹಲವಾರು ಉದ್ಯೋಗ ಅವಕಾಶಗಳಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ: 9606023005, 9606023009

LEAVE A REPLY

Please enter your comment!
Please enter your name here