ಮಡಂತ್ಯಾರು: ಸ್ವಾರ್ಥಕತೆ ಮತ್ತು ಉದಾರತೆ ಶಿಕ್ಷಣದ ಚಿಂತನೆಗೆ ಬದುಕಲು ಪೂರಕ. ಮನುಷ್ಯ ಶಿಕ್ಷಣ ತನ್ನ ಸ್ವಾರ್ಥಕ್ಕೆ ಮಾತ್ರ ಬಳಸದೆ ಉದಾರತೆಯಿಂದ ಪರರಿಗೆ ಸೇವೆ ನೀಡಲು ಸದಾ ಸಿದ್ಧರಿರಬೇಕು ಇಂತಹ ಕೆಲಸ ವಂ.ಫಾ.ಜೆರೋಮ್ ಡಿ’ಸೋಜಾ ಮಾಡಿದ್ದಾರೆ ಎಂದು ಮಂಗಳೂರು ಮಿಲಾಗ್ರಿಸ್ ಚರ್ಚ್ ಧರ್ಮಗುರು, ಮಾಜಿ ಕ್ಯಾಥೊಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂ.ಫಾ.ಬೊನಾವೆಂಚರ್ ನಜ್ರೆತ್ ಹೇಳಿದರು.
ಅವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿ ಜು.31ರಂದು ನಿವೃತ್ತಿ ಹೊಂದಿದ ವಂ.ಫಾ.ಜೆರೋಮ್ ಡಿ’ಸೋಜಾರವರಿಗೆ ಆ.8ರಂದು ಸೇಕ್ರೆಡ್ ಹಾರ್ಟ್ ಸಭಾ ಭವನದಲ್ಲಿ ಜರಗಿದ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಣ ಪುಸ್ತಕದ ಬದನೆಕಾಯಿಯಾಗಬಾರದು. ತಲೆ, ಕೈ, ಹೃದಯವಂತಿಗೆ ಇಲ್ಲದೆ ಏನು ಪ್ರಯೋಜನವಿಲ್ಲ. ಬೆಲ್ಮನ್ ಶಾಲಾ ಮುಖ್ಯೋಪಾದ್ಯಾಯರಾಗಿದ್ದ ಸಂದರ್ಭ ಅವರನ್ನು ನಾನು ಪದವಿ ಪೂರ್ವ ಕಾಲೇಜುನಲ್ಲಿ ಸೇವೆ ಮಾಡಲು ಅನುವು ಮಾಡಿ ಕೊಟ್ಟಿದ್ದೆ. ನಂತರ ಐಕಳ ಕಾಲೇಜಿನಲ್ಲಿ ಮತ್ತು ಇಲ್ಲಿಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ವಂ.ಫಾ.ಜೆರೋಮ್ ಡಿ’ಸೋಜಾರವರು ಶಿಕ್ಷಣ ಸಂಸ್ಥೆ ಎಂದರೆ ಜ್ಞಾನ ದೇಗುಲ, ಪವಿತ್ರ ಸ್ಥಳ. ಶಿಕ್ಷಣ ಸಂಸ್ಥೆ ಇದ್ರೆ ಮಾತ್ರ ಸಾಲದು. ಮೂಲಭೂತ ಸೌಕರ್ಯ ಇದ್ರೆ ಮಾತ್ರ ಕಾಲೇಜು ಪ್ರಗತಿ ಕಾಣಲು ಸಾಧ್ಯ. ಇಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಎಲ್ಲ ಶಿಕ್ಷಣ ಪೋಷಕರಿಂದ ಮಾತ್ರ ಸಾಧ್ಯ. ಈಗ ಎಲ್ಲ ಡಿಜಿಟಲೀಕರಣವಾಗಿದೆ ಆದರೆ ಗುಣ ಮಟ್ಟದ ಶಿಕ್ಷಣ ಇಲ್ಲದ್ರೆ ಏನು ಪ್ರಯೋಜನ. ಧರ್ಮಗುರುಗಳ ಸೇವೆ ಕ್ರೈಸ್ತ ಧರ್ಮದವರಿಗೆ ಮಾತ್ರವಲ್ಲ ಸಮಾಜಕ್ಕೆ ಶಾಲಾ ಶಿಕ್ಷಣ ಮುಖಾಂತರ ಸೇವೆ ನೀಡುತ್ತಾ ಬಂದಿದ್ದೇವೆ. ನಮ್ಮ ಜೀವನದಲ್ಲಿ ಶಿಸ್ತು ಕಾಪಾಡಿಕೊಂಡು ಬರೋಣ ಎಂದು ಹೆಳಿದರು.
ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ವಂ|ಡಾ|ಸ್ಟ್ಯಾನಿ ಗೋವಿಯಸ್ ಅಧ್ಯಕ್ಷತೆ ವಹಿಸಿದ್ದರು.ಅಭ್ಯಾಗತರಾಗಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ರೆ|ಫಾ|ದೀಪಕ್ ಲಿಯೋ ಡೆಸಾ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೋರಸ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಪ್ರಾಂಶುಪಾಲ ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ, ಮಡಂತ್ಯಾರು ಗಾರ್ಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಹೆಲೆನ್ ಲೋಬೋ, ಪಿಟಿಎ(ಪಿಯುಸಿ ವಿಭಾಗ) ಉಪಾಧ್ಯಕ್ಷರು ವಿಲಿಯಂ ಪಿಂಟೋ, ಪಿಟಿಎ(ಪ್ರೌಢಶಾಲಾ ವಿಭಾಗ) ಉಪಾಧ್ಯಕ್ಷರು ಐವನ್ ಸಿಕ್ವೇರಾ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಬಿ.ರಾಜಶೇಖರ್ ಶೆಟ್ಟಿ ಮಡಂತ್ಯಾರು, ಕಾಲೇಜು ಪ್ರಾಂಶುಪಾಲ ಸೂರಜ್ ಚಾರ್ಲ್ಸ್ ನ್ಯೂನೆಸ್ ಹಾಗೂ ಬೀಳ್ಕೊಡುಗೆ ಸಮಾರಂಭದ ಸಂಯೋಜಕರು, ಪ್ರಭಾರಿ ಮುಖ್ಯೋಪಾಧ್ಯಾಯಿನಿ ಶಾಂತಿ ಮೇರಿ ಡಿ’ಸೋಜ, ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ಬಂಧುಗಳು ಹಾಗೂ ವಿದ್ಯಾರ್ಥಿ ವೃಂದ, ಪೋಷಕರು ಭಾಗವಹಿಸಿದ್ದರು.
ಪ್ರಭಾರ ಮುಖ್ಯೋಪಾಧ್ಯಾಯಿನಿ ಶಾಂತಿ ಡಿ’ಸೋಜಾ ಸ್ವಾಗತಿಸಿದರು. ವಿದ್ಯಾರ್ಥಿ ಮೋಕ್ಷಿತ್, ಪ್ರಾಂಶುಪಾಲ ಸೂರಜ್ ಚಾರ್ಲ್ಸ್ ನ್ಯೂನೆಸ್, ಸೇಕ್ರೆಡ್ ಹಾರ್ಟ್ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಅಲೆಕ್ಸ್ ಐವನ್ ಸಿಕ್ವೇರಾ, ಪಾಲನಾ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್ ನಿವೃತ್ತ ಪ್ರಾಂಶುಪಾಲರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.ಶಿಕ್ಷಕ ವಸಂತ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.