

ಶಿಬಾಜೆ: ಪೊಸೋಡಿ-ಬಂಗೇರಡ್ಕ ರಸ್ತೆಯು ಪಂಚಾಯತ್ ಗೆ ಸೇರಿದ ಕಚ್ಚಾ ರಸ್ತೆಯಾಗಿದ್ದು ದುರಸ್ತಿಗೊಳ್ಳದೆ ಹಲವು ವರ್ಷಗಳೇ ಕಳೆದಿದೆ.
ಕಾಡು ದಾರಿಯಲ್ಲಿರುವ ಈ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಗಳು ಸರಿ ಇಲ್ಲದೆ ನೀರು ಮಾರ್ಗದಲ್ಲೆ ಹರಿದು ರಸ್ತೆಯ ಕೆಲವು ಭಾಗದ ಮಣ್ಣು ಕೊಚ್ಚಿಕೊಂಡು ಬಂದು ಇನ್ನೊಂದು ಭಾಗದಲ್ಲಿ ನಿಂತು ಕೆಸರು ಗದ್ದೆಯoತಾಗಿರುತ್ತಿತ್ತು.
ಈ ರಸ್ತೆಯ ಪರಿಸ್ಥಿತಿಯನ್ನು ನೋಡಿ ಸ್ಥಳೀಯರೇ ಸೇರಿ ಪಿಕಪ್ ತುಂಬೆಲ್ಲ ಕಲ್ಲನ್ನು ತುಂಬಿಕೊಂಡು ಬಂದು ಕೊಚ್ಛೆಯಂತಾಗಿದ್ದ ಸ್ಥಳಗಳಿಗೆ ಜೋಡಿಸಿ ತಕ್ಕ ಮಟ್ಟಿಗೆ ವಾಹನ ಮತ್ತು ಮನುಷ್ಯರು ಪ್ರಯಾಣಿಸುವಂತೆ ಮಾಡಿರುತ್ತಾರೆ.
ಶ್ರಮದಾನ ಕೆಲಸದಲ್ಲಿ ಸ್ಥಳೀಯ ಹೋಟೆಲ್ ಮಾಲಕ ಹರೀಶ್, ರತ್ನಾಕರ, ಜಯಪ್ರಕಾಶ್, ಹರಿಪ್ರಸಾದ್, ಪ್ರಶಾಂತ್, ದಯಾನoದ, ಸುರೇಶ್, ಒ.ಟಿ ಜೋನ್, ರಮೇಶ್, ಗುರುವಪ್ಪ, ಚಂದ್ರಹಾಸ, ಸುಧಾಕರ್ ಮುಂತಾದವರು ಭಾಗವಹಿಸಿದ್ದರು.