ದೇವಪ್ಪ ಎಂ ಉಪ ನಿರೀಕ್ಷಕರಾಗಿ ಭಡ್ತಿಗೊಂಡು ಉಪ್ಪಿನಂಗಡಿ ಸಂಚಾರಿ ಠಾಣೆಗೆ ವರ್ಗಾವಣೆ

0

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಸಹಾಯಕ ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವಪ್ಪ ಎಂ. ಉಪ ನಿರೀಕ್ಷಕರಾಗಿ (ಎಸ್.ಐ) ಭಡ್ತಿಗೊಂಡು ಉಪ್ಪಿನಂಗಡಿ ಠಾಣಾ ಸಂಚಾರಿ ವಿಭಾಗದಲ್ಲಿ ಅಧಿಕಾರ ಸ್ವೀಕರಿಸಿದರು.

ಇವರು ಕಳೆದ 31 ವರ್ಷಗಳಿಂದ ಮಂಗಳೂರು ಪಾಂಡೇಶ್ವರ, ಉಪ್ಪಿನಂಗಡಿ, ಮೂಡಬಿದ್ರೆ, ಪೂಂಜಾಲಕಟ್ಟೆ, ಬಂಟ್ವಾಳ ಗ್ರಾಮಾಂತರ, ವೇಣೂರು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಬೆಳ್ತಂಗಡಿ ವೃತ್ತ ನಿರೀಕ್ಷರ ಕಚೇರಿಯಲ್ಲಿ 3 ವರ್ಷ, ಬಳಿಕ ನಾಲ್ಕುವರೆ ವರ್ಷಗಳಿಂದ ಬೆಳ್ತಂಗಡಿ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು.

ಮೂಲತಃ ಬೆಳಾಲಿನ ಇವರು ಪ್ರಸ್ತುತ ಧರ್ಮಸ್ಥಳ ಕನ್ಯಾಡಿಯಲ್ಲಿ ಕುಟುಂಬ ಸಹಿತ ವಾಸ್ತವ್ಯ ಇದ್ದಾರೆ.

LEAVE A REPLY

Please enter your comment!
Please enter your name here