ಕಾಯರ್ತಡ್ಕ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆ- ಹೊಂಡಕ್ಕೆ ಬಿದ್ದ ಪಿಕಪ್- ಅಪಾಯದಲ್ಲಿ ಮತ್ತಷ್ಟು ವಾಹನ

1

ಕಾಯರ್ತಡ್ಕ: ಮಿಯಾರು-ಕಾಯರ್ತಡ್ಕ ರಸ್ತೆಯಲ್ಲಿರುವ ಬೃಹತ್ ಹೊಂಡ, ಗುಂಡಿಗಳ ಬಗ್ಗೆ ವರದಿ ಬಂದರೂ ಯಾವುದೇ ಕ್ರಮಕ್ಕೆ ಮುಂದಾಗಾದ ಜನಪ್ರತಿನಿಧಿಗಳು,ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಹಿಂದೆ ರಸ್ತೆಯಲ್ಲಿ ವಾಹನ ಸವಾರ ಬೇಸರಗೊಂಡು ಹೊಂಡದಲ್ಲಿ ಗಿಡ ನೆಟ್ಟ ಘಟನೆ ನಡೆದಿದೆ ಇದರ ನಡುವೆ ಕಾಯರ್ತಡ್ಕ ರಸ್ತೆಯಲ್ಲಿ ಹೊಂಡಕ್ಕೆ ಬಿದ್ದು ಪಿಕಪ್ ರಸ್ತೆಯ ಮಧ್ಯೆ ಮಿಯಾರು ಎಂಬಲ್ಲಿ ಬಾಕಿಯಾದ ಘಟನೆ ಆ.5ರಂದು ನಡೆಯಿತು.ಹೊಂಡಕ್ಕೆ ಬಿದ್ದು ಪಿಕಪ್ ವಾಹನವನ್ನು ಮತ್ತೊಂದು ಪಿಕಪ್ ನ ಸಹಾಯದಿಂದ ಹಗ್ಗ ಕಟ್ಟಿ ಮೇಲಕ್ಕೆತ್ತಲಾಯಿತು.

ಈ ರಸ್ತೆಯಲ್ಲಿ ಬೈಕ್, ರಿಕ್ಷಾ ಬಿದ್ದರೆ ಮತ್ತಷ್ಟು ಅಪಾಯ ಕಟ್ಟಿಟ್ಟ ಬುತ್ತಿ. ಕಳೆದ ಒಂದು ವಾರದ ಹಿಂದೆ ಸರಕಾರಿ ಬಸ್ ಇದೇ ರೀತಿ ರಸ್ತೆ ಮದ್ಯೆ ಸಿಕ್ಕಿಕೊಂಡಿತ್ತು ಎಂದು ತಿಳಿದು ಬಂದಿದೆ.ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಿ ಸಂಚಾರಕ್ಕೆ ಮುಕ್ತ ಮಾಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

1 COMMENT

  1. ಬೆಳ್ತಂಗಡಿ ತಾಲೂಕಿನ ಶಾಸಕರು ಪ್ರಚಾರ ಸಿಗುವಲ್ಲಿ ಮಾತ್ರ ಓಡೋಡಿ ಬರುತ್ತಾರೆ..

Leave a Reply to Murali Cancel reply

Please enter your comment!
Please enter your name here