ಬೆಳಾಲು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 43ನೇ ವರ್ಷದ ಅಧ್ಯಕ್ಷರಾಗಿ ಬೆಳಾಲು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ ಆಯ್ಕೆಯಾದರು.ಗೌರವಾಧ್ಯಕ್ಷರಾಗಿ ಶಿವಕುಮಾರ್ ಬಾರಿತ್ತಾಯ ಪಾರಳ, ಕಾರ್ಯದರ್ಶಿಯಾಗಿ ರಾಮಚಂದ್ರ ಗೌಡ ಮಾಯ, ಕೋಶಾಧಿಕಾರಿಯಾಗಿ ದಿವಾಕರ ಆಚಾರ್ಯ ಬೆಳಾಲು ಆಯ್ಕೆಯಾದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪೂರ್ವ ಭಾವಿಸಭೆ ಬೆಳಾಲು ಶ್ರೀ ಧ.ಮ.ಪ್ರೌಢ ಶಾಲೆಯಲ್ಲಿ 42ನೇ ವರ್ಷದ ಅಧ್ಯಕ್ಷ ಶಿವಕುಮಾರ್ ಬಾರಿತ್ತಾಯರ ಅಧ್ಯಕ್ಷತೆಯಲ್ಲಿ ನಡೆಯಿತು.
ಪೂಜಾ ಅರ್ಚಕ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ವನಿತಾ, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯರಾಮ ಮಯ್ಯ, ಗಣೇಶೋತ್ಸವ ಸಮಿತಿಯ ನಿಕಟ ಪೂರ್ವ ಕಾರ್ಯದರ್ಶಿ ಹರೀಶ್ ಆಚಾರ್ಯ, ಮಾಜಿ ಅಧ್ಯಕ್ಷ ಗಣೇಶ್ ಕನಿಕ್ಕಿಲ, ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಎಳ್ಳುಗದ್ದೆ, ಸೇವಾ ಪ್ರತಿನಿಧಿಗಳಾದ ತಾರನಾಥ ಬೆಳಾಲು ಜಿ., ಪ್ರಮೀಳಾ ಲಕ್ಷ್ಮಣ ಕೊಲ್ಪಾಡಿ, ಪ್ರಭಾವತಿ ಮಾಯ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.
ಬೆಳಾಲು ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ ಸ್ವಾಗತಿಸಿ ನಿರೂಪಿಸಿದರು. ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್ ವಂದಿಸಿದರು.