ಮಡಂತ್ಯಾರು: ರೋಟರಿ ಕ್ಲಬ್ ವತಿಯಿಂದ ರೋಟರಿ ಬದುಕು ಉಪನ್ಯಾಸ ಕಾರ್ಯಕ್ರಮ

0

ಮಡಂತ್ಯಾರು: ಸಾರ್ವಜನಿಕ ರಂಗದಲ್ಲಿ ರೋಟರಿ ಎಂಬುದು ಮಹಾನ್ ಸೇವಾಸಂಸ್ಥೆ, ಈ ಸಂಸ್ಥೆಯಿಂದ ಹಲವಾರು ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಬಂದಿದೆ ಮತ್ತು ರೋಟರಿ ಎಂಬುದು ಸಾಮರಸ್ಯ ಬದುಕಿಗೆ ಅಡಿಪಾಯವಾಗಿದೆ, ಇದೊಂದು ಮಹಾ ಸೇವಾ ಸಂಸ್ಥೆ ಜಗತ್ತಿನ ಎಲ್ಲೆಡೆ ಕಾರ್ಯವ್ಯಾಪ್ತಿ ಹೊಂದಿ ನಿರಂತರ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಂಡಿದೆ ಎಂಬ ಬಗ್ಗೆ ವಿಸ್ತಾರವಾಗಿ ರೋ.ಮೋನಪ್ಪ ಪೂಜಾರಿ ಕಂಡೆತ್ಯಾರು ಇವರು ವಿವರವಾಗಿ ತಿಳಿಸಿದರು.

ರೋಟರಿ ಎಂಬುದು ಮನಶಾಂತಿಯೊಂದಿಗೆ ಬದುಕಿಗೆ ಅರ್ಥ ಕಲ್ಪಿಸಿ ನೆಮ್ಮದಿಯ ಜೀವನಕ್ಕೆಅಡಿಪಾಯ ಎಂಬ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿ ಸವಿಸ್ತಾರವಾಗಿ ರೋಟರಿ ಬದುಕು ಎಂಬ ವಿಷಯದ ಬಗ್ಗೆ ಬಹಳಷ್ಟು ಮಾಹಿತಿಗಳನ್ನ ನೀಡಿದರು.

ಈ ಸಂದರ್ಭದಲ್ಲಿ ಮಡಂತ್ಯಾರು ರೋಟರಿ ಕ್ಲಬ್ ನ ಬಗ್ಗೆ ಅಭಿಮಾನದ ಮಾತುಗಳನ್ನಾಡಿ ರೋಟರಿ ಕಬ್ಬಿನ ವಿಶೇಷತೆಗಳನ್ನು ಎಲ್ಲರಿಗೆ ಮನಮುಟ್ಟುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ರೋ ನಿತ್ಯಾನಂದ ಬಿ, ನಿಕಟ ಪೂರ್ವಾಧ್ಯಕ್ಷ ರೋ ಶ್ರೀಧರ್ ಭಟ್, ಕಾರ್ಯದರ್ಶಿ ರೋ ತುಳಸಿದಾಸ್ ಪೈ, ಪೂರ್ವ ಅಧ್ಯಕ್ಷರುಗಳು ಮತ್ತು ಸರ್ವ ಸದಸ್ಯರು ಕುಟುಂಬ ಸಮೇತರಾಗಿ ಹಾಜರಿದ್ದರು.

LEAVE A REPLY

Please enter your comment!
Please enter your name here