

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಥಮ ಬಿಬಿಎ ವಿದ್ಯಾರ್ಥಿನಿ ಆಗಿರುವ ಕುಮಾರಿ ತ್ರಿಷಾ ಇವರು ಇದೀಗ ಝೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಗೆ ಆಯ್ಕೆಯಾಗಿ ಬಿಗ್ ಬಾಸ್ ವಿನ್ನರ್ ಪ್ರಥಮ್ ಅವರೊಂದಿಗೆ ಜೋಡಿ ಡಾನ್ಸ್ ಮಾಡುವುದರ ಮೂಲಕ ತೀರ್ಪುಗಾರರ ಮನಸ್ಸನ್ನು ಗೆದ್ದು ಬೆಳ್ತಂಗಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಉತ್ತುಂಗ ಮಟ್ಟಕೆ ಕೊಂಡೋಗಲು ಸಜ್ಜಾಗಿದ್ದಾರೆ.
ಇವರು ಗುರುವಾಯನಕೆರೆ ಪ್ರಶಾಂತ್ ಮತ್ತು ಶೈಲಜಾ ಎಂ.ಕೆ ಇವರ ಪುತ್ರಿ.ಸುಮಾರು 8 ವರ್ಷದಿಂದ ನೃತ್ಯ ತರಬೇತಿಯನ್ನು ಬೆಳ್ತಂಗಡಿ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿಯಲ್ಲಿ ಕಲಿತು ಜಿತೇಶ್ ಕುಮಾರ್ ಇವರ ಶಿಷ್ಯೆಯಾಗಿರುತ್ತಾರೆ.
ಇವರು ಅಬ್ಬಕ ಲಿಟಲ್ ಚಾಂಪ್ ನಲ್ಲಿ ಮೊದಲ ರನ್ನರ್ ಅಪ್ ಆಗಿರುತ್ತಾರೆ. ನಮ್ಮ ಟಿವಿ, ನಮ್ಮ ಕುಡ್ಲ, ವಿ4 ನ್ಯೂಸ್, ಡೈಜೀವಲ್ಡ್ ರಿಯಾಲಿಟಿ ಶೋ ಇದರಲ್ಲಿ ಭಾಗವಹಿಸಿರುತ್ತಾರೆ ಹಾಗೂ ಹಲವಾರು ಕಾರ್ಯಕ್ರಮ ನೀಡಿ ಪುರಸ್ಕಾರ ಪಡೆದಿರುತ್ತಾರೆ.
ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಚರ್ಚ್ ಶಾಲೆಯಲ್ಲಿ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ವಾಣಿ ಸಂಸ್ಥೆಯಲ್ಲಿ ಪಡೆದಿರುತ್ತಾರೆ.