ಸಂತ ತೆರೇಸಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಮಹಾಸಭೆ

0

ಬೆಳ್ತಂಗಡಿ: 2024-25ನೇ ಶೈಕ್ಷಕಣಿಕ ವರ್ಷದ ರಕ್ಷಕ ಶಿಕ್ಷಕ ಮಹಾಸಭೆ ಸಂತ ತೆರೇಸಾ ಪ್ರೌಢಶಾಲೆಯ ಸಭಾಂಗಣದಲ್ಲಿ ಜು.27ರಂದು ನಡೆಯಿತು. ‘ಜೀವನ ಶಿಕ್ಷಣ ನೀಡೋಣ ಮಕ್ಕಳ ಬಾಳು ಬೆಳಗಿಸೋಣ’ ಎಂಬ ಧೈಯದೊಂದಿಗೆ ಆರಂಭಿಸಿದ ಈ ಶೈಕ್ಷಣಿಕ ವರ್ಷ ಪೋಷಕರ, ಶಿಕ್ಷಕ ವೃಂದದ ಅವಿರತ ಬೆಂಬಲದಿಂದ ಕಳೆದ 60 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸಂತ ತೆರೇಸಾ ಪ್ರೌಢಶಾಲೆ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿದೆ. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ನಮ್ಮ ಶಾಲಾ ಸಂಚಾಲಕಿ ವಂದನೀಯ ಭಗಿನಿ ತೆರೇಸಿಯಾ ಸೆರಾರವರು ಪೋಷಕರ ಬೆಂಬಲನ್ನು ಸ್ಮರಿಸಿ, ಆಡಳಿತ ಮಂಡಳಿಯ ಶುಭಾಶಯ ನೀಡಿ ಶಿಕ್ಷಕ ವೃಂದದ ಅವಿರತ ಪ್ರಯತ್ನವನ್ನು ಶ್ಲಾಘಿಸಿದರು.

ಸಂಪನ್ಮೂಲ ವ್ಯಕ್ತಿ ಸುನೀಲ್ ಪಿ ಜಿ ಜೀವಶಾಸ್ತ್ರ ಉಪನ್ಯಾಸಕರು ಇದೇ ಶಾಲೆಯ ವಿದ್ಯಾರ್ಥಿಯಾಗಿ ಅವರ ಅಮೂಲ್ಯ ಅನುಭವವನ್ನು ಹಂಚುವ ಮೂಲಕ ಸರ್ವರ ಮನ ಮುಟ್ಟುವಂತೆ ಪ್ರಚಲಿತ ಸಮಸ್ಯೆ ಮೊಬೈಲ್ ದುಶ್ಚಟಗಳು ಹಿರಿಯರಿಗೆ ಗೌರವ ನೀಡುವ ತತ್ವಗಳನ್ನು ತಿಳಿಸಿದರು.

ಹದಿ ಹರೆಯ ಪ್ರಾಯ ಸುಂದರ ಆದರೆ ಕುದಿಯುವ ಪ್ರಾಯ. ನಾವು ಹೇಳುವ ವಿಚಾರಗಳಿಗಿಂತ ಮಾಡುವ ವಿಚಾರಗಳನ್ನು ಅನುಕರಣೆ ಮಾಡಿಕೊಳ್ಳುತ್ತಾರೆ. ನಮ್ಮ ಅಪ್ಪಂದಿರು ಹೀರೋ ಮತ್ತು ಅಮ್ಮಂದಿರು ಹಿರೋಹಿನ್‌ಗಳಾಗಬೇಕು. ಮಕ್ಕಳಿಗೆ ಎಲ್ಲಾ ಆಯಾಮಗಳನ್ನು ತೋರಿಸಿ, ಆಗ ಮಾತ್ರ ಸತ್ಪಜೆಗಳಾಗಿ ಬೆಳೆಯಲು ಸಾಧ್ಯ ಎಂದು ಸರಳ ಉದಾಹರಣೆಗಳಿಂದ ಎಳೆ ಎಳೆಯಾಗಿ ತಿಳಿಸಿದರು.

ಆಡಳಿತ ಮಂಡಳಿ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಧೈಯ ‘ಭ್ರಾತೃತ್ವ’ ಎಂಬ ವಿಷಯವನ್ನು ಉದ್ಘಾಟನೆಯನ್ನು ವೇದಿಕೆಯಲ್ಲಿರುವ ಗಣ್ಯರು ಭಾರತದ ಸಂವಿಧಾನದ ದಾಖಲೆಗಳನ್ನು ಅಲಂಕರಿಸಿದ ವೇದಿಕೆಯಲ್ಲಿರಿಸುವುದರ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಕಳೆದ ರಕ್ಷಕ ಶಿಕ್ಷಕ ಮಹಾಸಭೆಯ ವರದಿಯನ್ನು ಕಾರ್ಯದರ್ಶಿ ಶಿಕ್ಷಕಿ ನಿಶಾರವರು ಸಭೆಯಲ್ಲಿ ಮಂಡಿಸಿದರು.

2023-24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಕನ್ನಡ ಮಾಧ್ಯಮದ ಯಶಸ್ವಿ, ಆಂಗ್ಲ ಮಾಧ್ಯಮದ ಸಮೀಕ್ಷರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾರಾಯಣ ಶೆಟ್ಟಿ, ಸಂತ ತೆರೇಸಾ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರು ವಂದನೀಯ ಆರೋಗ್ಯರವರು ಉಪಸ್ಥಿತರಿದ್ದರು.ವಂದನೀಯ ಭಗಿನಿ ಜೆಸಿಂತಾ ಬರೆಟ್ರೊ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ದೈಹಿಕ ಶಿಕ್ಷಕ ವಿನ್ಸೆಂಟ್ ಇವರು ಸರ್ವರನ್ನು ವಂದಿಸಿದರು.

p>

LEAVE A REPLY

Please enter your comment!
Please enter your name here