ಉಜಿರೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

0

ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ)ದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಕಿರಣ್, ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ಇವರು ಮಾತನಾಡುತ್ತಾ ಕಾರ್ಗಿಲ್ ಯುದ್ಧದ ಹಿನ್ನಲೆಯನ್ನು ತಿಳಿಸಿ, ಭಾರತೀಯ ಸೈನಿಕರ ಧೈರ್ಯ, ತ್ಯಾಗ, ಕೆಚ್ಚೆದೆಯ ಶೌರ್ಯ, ಪರಾಕ್ರಮವು ಇಡೀ ವಿಶ್ವಕ್ಕೆ ತಿಳಿಯಲು ಮೂಲವಾದರೂ ಭಾರತವು ಅಪಾರ ಸಾವು-ನೋವುಗಳನ್ನು ಅನುಭವಿಸಬೇಕಾಯಿತು.

ಯುದ್ಧದಿಂದಾಗಿ ಭಾರತೀಯ ಸೈನ್ಯವು ಅನುಭವಿಸಿದ ಕಷ್ಟಗಳು ಹಾಗೂ ಹೂಡಿದ ಯೋಜನೆಯನ್ನು ತಿಳಿಸಿದರು. ಇವರ ಹೋರಾಟ, ಯೋಜನೆಗಳ ಪ್ರತಿಫಲವೇ ಕಾರ್ಗಿಲ್ ಯುದ್ಧದ ಗೆಲುವಾಗಿ ನಾವು ನೋಡಬಹುದು. ಹೀಗಾಗಿ ಯುದ್ಧವೆನ್ನುವುದು ಪರಿಹಾರವಲ್ಲ, ಅದು ಇನ್ನೊಂದು ಯುದ್ಧಕ್ಕೆ ಮೂಲ. ಹೀಗಾಗಿ ಶಾಂತಿಯ ಮೂಲಕ ನಮ್ಮಲ್ಲಿನ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳುವ ಮೂಲಕ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳೋಣ ಎಂದರು.

ಕಾರ್ಗಿಲ್ ಯುದ್ಧವು ಭಾರತೀಯರ ಆತ್ಮಾಭಿಮಾನ, ರಾಜತಾಂತ್ರಿಕತೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರ ಮತ್ತು ಭಾರತದ ಸೇನೆಯ ಪ್ರಾಬಲ್ಯವನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯಾಗಿ ರೂಪುಗೊಂಡಿತ್ತು. ನಮ್ಮ ದೇಶವನ್ನು ಕಾಯುವ ಯೋಧರ ತ್ಯಾಗ, ಬಲಿದಾನಗಳು ಮತ್ತು ತುರ್ತು ಸನ್ನಿವೇಶಗಳಲ್ಲಿ ಆಪ್ತದೇಶಗಳ ಪ್ರಾಮಾಣಿಕ ಸಹಕಾರಗಳು ಈ ಗೆಲುವಿಗೆ ಪ್ರಮುಖ ಸಾಕ್ಷಿಯಾಗಿದೆ. ಭಾರತ ದೇಶವು ಯುದ್ಧ ಮಾಡುವುದಿಲ್ಲ ಆದರೆ ಭಾರತವನ್ನು ಕೆಣಕಲು ಬಂದಾಗ ಸುಮ್ಮನೆ ಬಿಡುವುದಿಲ್ಲಎಂಬ ಮಾತನ್ನು ಅಧ್ಯಕ್ಷೀಯ ನುಡಿಯಲ್ಲಿ ಪ್ರಶಿಕ್ಷಣಾರ್ಥಿ ಕೀರ್ತನ್ ಕುಮಾರ್ ತಿಳಿಸಿದರು.

ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ದೇಶಭಕ್ತಿಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ವಿದ್ಯಾಶ್ರೀ ಪಿ, ತಿರುಮಲೇಶ ರಾವ್ ಎನ್ ಕೆ, ಅನುಷಾ ಡಿ ಜೆ, ಚೈತ್ರ ಹಾಗೂ ಪ್ರಥಮ ಮತ್ತು ದ್ವಿತೀಯ ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಆದ್ಯ ಅತಿಥಿಗಳನ್ನು ಪರಿಚಯಿಸಿ, ಶೋಭಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

p>

LEAVE A REPLY

Please enter your comment!
Please enter your name here