ಗೇರುಕಟ್ಟೆ: ಉಪ್ಪಿನಂಗಡಿ ಹವ್ಯಕ ಮಂಡಲ ವ್ಯಾಪ್ತಿಯ ಉರುವಾಲು ವಲಯ, ಶ್ರೀ ದೇವಿ ಘಟಕದ ವತಿಯಿಂದ ಗೇರುಕಟ್ಟೆ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 1987ರಲ್ಲಿ ಗುಮಾಸ್ತರಾಗಿ ಸೇವೆ ಪ್ರಾರಂಭಿಸಿ 2018ರಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಭಡ್ತಿಗೊಂಡು ಕಾರ್ಯನಿರ್ವಹಿಸಿ, 37 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸತ್ಯಶಂಕರ ಕೆ.ಜಿ ಅವರನ್ನು ಶ್ರೀ ದೇವಿ ಘಟಕದ ಸದಸ್ಯ ಗೇರುಕಟ್ಟೆಯ ಹೇರೋಡಿ ದಿನೇಶ್ ಭಟ್ ನಿವಾಸದಲ್ಲಿ ಜುಲೈ 21ರಂದು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ದೇವಿ ಘಟಕದ ಗುರಿಕಾರರಾದ ದಿವಾಕರ ಶಾಸ್ತ್ರಿ ಮಾತನಾಡಿ, 1987ರಿಂದ ಸತ್ಯಶಂಕರ್ ಅವರ ನಿಸ್ವಾರ್ಥ ಸೇವೆ ಮತ್ತು ಕೆಲಸದಲ್ಲಿನ ದಕ್ಷತೆಯನ್ನು ಗಮನಿಸುತ್ತಾ ಬಂದಿರುವೆ. ಹಣಕಾಸಿನ ವಿಚಾರದಲ್ಲಿ ಊರವರ ವಿಶ್ವಾಸ ಹಾಗೂ ಪ್ರಂಶಂಸೆಯನ್ನು ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಸತ್ಯಶಂಕರ್ ಅವರ ಸುದೀರ್ಘ ಸೇವೆಯನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಶ್ರೀ ದೇವಿ ಘಟಕದ ಸದಸ್ಯ ವೆಂಕಟೇಶ್ವರ ಭಟ್ ಮಾತನಾಡಿ, ವಿದ್ಯೆಯ ಮಹತ್ವವನ್ನು ವಿವರಿಸುತ್ತಾ, ಶೂನ್ಯದಿಂದ ಮೊದಲ್ಗೊಂಡು ಬೆಳೆಯುತ್ತಾ ಸಾಧನೆಯ ಶಿಖರ ಏರಲು ವಿದ್ಯೆಯೇ ಅತ್ಯುತ್ತಮ ಮೆಟ್ಟಿಲು, ಇದಕ್ಕೆ ಉತ್ತಮ ಉದಾಹರಣೆಯಾದ ಸತ್ಯಶಂಕರ್ ಅವರ ಪ್ರಾಮಾಣಿಕತೆ ಹಾಗೂ ವೃತ್ತಿಪರತೆಯನ್ನು ಸ್ಮರಿಸಿದರು.
ಸನ್ಮಾನಿತರಾದ ಸತ್ಯಶಂಕರ್ ಮಾತನಾಡಿ ತನ್ನ ಸೇವಾವಧಿಯಲ್ಲಿ ಸಹಕಾರ ನೀಡಿದ ಶ್ರೀ ದೇವಿ ಘಟಕದ ಎಲ್ಲಾ ಸದಸ್ಯರಿಗೂ ಹಾಗೂ ಊರವರಿಗೆ ಕೃತಜ್ಞತೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೋವಿಂದ ಶಾಸ್ತ್ರಿ, ದೇವಿಕಾ ಶಾಸ್ತ್ರಿ, ರಾಜಶ್ರೀ ಎಸ್ ಭಟ್, ರವಿರಾಮ ಭಟ್ ಗೋವಿಂದೂರು, ಗಣಪತಿ ಭಟ್ ಬಳ್ಳಿ, ಕೃಷ್ಣ ಕುಮಾರ, ರಾಜೇಶ್ ಪಿಜಿನುಕ್ಕು, ಸುಬ್ರಹ್ಮಣ್ಯ ಭಟ್ ಇಡ್ಯ, ಪ್ರಶಾಂತ್ ಕಾಯರ್ಪಾಡಿ, ಪದವು ಸುಬ್ರಹ್ಮಣ್ಯ ಭಟ್, ಸುಕುಮಾರ ಭಟ್, ಮುರಳೀಕೃಷ್ಣ, ರಮೇಶ್ ಭಟ್, ರಾಮ ಪ್ರಕಾಶ್ ಭಟ್ ದೇರ್ಜಾಲು, ಕೃಷ್ಣ ಪ್ರಶಾಂತ್ ವಿ ದೇರ್ಜಾಲು, ಸೀತಾಲಕ್ಷ್ಮಿ ಉಪಸ್ಥಿತರಿದ್ದರು.