

ಧರ್ಮಸ್ಥಳ: ನೇತ್ರಾವತಿ ಹೊಳೆಯ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸುವ ಕಾರ್ಯ ನಡೆಯಿತು.
ಗಾಳಿ ಮಳೆಯ ರಭಸಕ್ಕೆ ರಸ್ತೆಗೆ ದೊಡ್ಡ ಮರವೊಂದು ಮುರಿದು ಬಿದ್ದು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಬಿದ್ದ ಮರವನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ನೇತ್ರಾವತಿ ಮಾಹಿತಿ ಕಛೇರಿಯ ಮ್ಯಾನೇಜರ್ ಹಾಗೂ ಅಲ್ಲಿಯ ಸ್ವಯಂ ಸೇವಕರು, ಸಿಬ್ಬಂದಿಯವರು ಭಾಗಿಯಾಗಿದ್ದರು.