

ಕೊಯ್ಯೂರು: ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಕೃಷ್ಣ ಭಜನಾ ಮಂಡಳಿ ಆದೂರ್ ಪೇರಲ್ ಕೊಯ್ಯೂರು ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ ನಡೆಯುವ 37ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಮಹಾಸಭೆಯು ಗಣೇಶೋತ್ಸವ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ವಿನಯ ಕೆ.ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ವಿನಯ ಕೆ., ಅಧ್ಯಕ್ಷರಾಗಿ ದೇಜಪ್ಪ ಗೌಡ ಬೆಲ್ದೆ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಕುಮಾರ್ ಕಜೆ, ಉಪಾಧ್ಯಕ್ಷರಾಗಿ ಯಶವಂತ ಗೌಡ ಪೂರ್ಯಾಳ, ಮತ್ತು ಹೇಮಂತಗೌಡ ನಾಗನೊಡಿ, ಕೋಶಾಧಿಕಾರಿಯಾಗಿ ಗೀತಾ ರಾಮಣ್ಣ ಗೌಡ, ಕಾರ್ಯದರ್ಶಿಗಳಾಗಿ ನಾರಾಯಣ ನಾಯ್ಕ್ ಪುಂಡೈದಡಿ, ದಿನೇಶ್ ಗೌಡ ಜಾಲ್ನಪು,ಸಲಹೆಗರರಾಗಿ ವಿಜಯ್ ಕುಮಾರ್ ಎಮ್. ಸಮೃದ್ಧಿ ನಿಲಯ
ಕ್ರೀಡಾ ಸಮಿತಿ ಸಂಚಾಲಕರಾಗಿ ದಾಮೋದರ ಗೌಡ ಬೆರ್ಕೆ, ಪೂರ್ಣಿಮಾ ಹೇಮಂತಗೌಡ ಜಂಕಿನಡ್ಕ, ಅಲಂಕಾರ ಸಮಿತಿಯ ಸಂಚಾಲಕರಾಗಿ ದಯಾನಂದ ಆಚಾರ್ಯ ಆದರ್ಶ ನಗರ, ಧಾರ್ಮಿಕ ಸಮಿತಿ ಶ್ರೀ ಕೃಷ್ಣ ಭಜನಾ ಮಂಡಳಿಯ ಪುರುಷ ಮತ್ತು ಮಹಿಳಾ ಮಂಡಳಿಯ ಸರ್ವ ಸದಸ್ಯರು, ಆಹ್ವಾನಿತ ಭಜನಾ ಮಂಡಳಿಗಳ ಸಂಚಾಲಕರಾಗಿ ಪಿ.ಚಂದ್ರಶೇಖರ ಸಾಲ್ಯಾನ್ ಆದರ್ಶ ನಗರ, ಮೆರವಣಿಗೆ ಸಮಿತಿಯ ಪ್ರಧಾನ ಸಂಚಾಲಕರಾಗಿ ಶೇಖರ ಗೌಡ ಕೋರಿಯಾರು, ಸಹ ಸಂಚಾಲಕರಾಗಿ ಕುಶಾಲಪ್ಪ ನಾಯ್ಕ ಕುಕ್ಕುದಡಿ, ಅನ್ನದಾನ ಸಮಿತಿಯ ಸಂಚಾಲಕರಾಗಿ ರಮೇಶ್ ಗೌಡ ಮೈಂದಕೋಡಿ, ನಾರಾಯಣ ಗೌಡ ನಾಗನೋಡಿ, ಸಮಿತಿಗಳನ್ನು ರಚಿಸಲಾಯಿತು.
ನಾರಾಯಣ ನಾಯ್ಕ ಸ್ವಾಗತಿಸಿ, ಗೀತಾ ರಾಮಣ್ಣ ಗೌಡ ವಂದಿಸಿದರು.