

ಕೊಕ್ಕಡ: ಜೆಸಿಐ ಕಪಿಲಾ ಸಂಸ್ಥೆಯ ವತಿಯಿಂದ ಚಿತ್ತಾರ 2024 ಕಾರ್ಯಕ್ರಮವು ಜುಲೈ 20ರಂದು ಸಂತ ಜಾನರ್ ಹಿರಿಯ ಪ್ರಾಥಮಿಕ ಶಾಲೆ ಕೌಕ್ರಾಡಿ (ಕೊಕ್ಕಡ) ಎಂಬಲ್ಲಿ ಜರಗಿತು. ಅಧ್ಯಕ್ಷತೆಯನ್ನು ಸಂತೋಷ್ ಜೈನ್ ವಹಿಸಿದ್ದರು.
ಅದ್ವಿತ್ ಜೈನ್ ಜೆಸಿ ವಾಣಿ ವಾಚಿಸಿದರು. ಸಂಚಾಲಕ ವಂ.ಫಾ.ಅನಿಲ್ ಪ್ರಕಾಶ್ ಡಿ’ಸಿಲ್ವಾ ಉದ್ಘಾಟಿಸಿ ಶುಭ ಹಾರೈಸಿದರು. ಜೆಸಿಂತಾ ಡಿಸೋಜ ಹಾಗೂ ಶೋಭಾ ಪಿ ಅವರು ಅತಿಥಿಗಳನ್ನು ಪರಿಚಯಿಸಿದರು. ಮುಖ್ಯ ಶಿಕ್ಷಕಿ ಜೆನೆವಿವ್ ಫೆರ್ನಾಂಡಿಸ್ ವಿಜೇತ ಮಕ್ಕಳ ವಿವರವಿತ್ತರು.

ಪುತ್ತೂರಿನ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರವೀಣ್ ವರ್ಣಕುಟೀರ ನೇತೃತ್ವದಲ್ಲಿ ಸುಮಾರು 50 ಮಕ್ಕಳಿಗೆ ಚಿತ್ರಕಲೆ ತರಬೇತಿ ನಡೆಸಲಾಯಿತು.
ಗ್ರೀಟಿಂಗ್ಸ್ ತಯಾರಿ, ಮಾರ್ಬಲ್ ಆರ್ಟ್ಸ್, ಪೈಯಿಂಟ್ಸ್ ಕುರಿತು ತರಬೇತಿ ಜೆಸಿ ವತಿಯಿಂದ ಶಿಬಿರವನ್ನು ಆಯೋಜಿಸಲಾಯಿತ್ತು.ಹಲವು ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಜೋಸೆಫ್ ಪಿರೇರ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ನಿಕಟ ಪೂರ್ವ ಅಧ್ಯಕ್ಷ ಜಿತೇಶ್ ಎಲ್ ಪಿರೇರ, ಯುವ ಜೆಸಿ ಅಧ್ಯಕ್ಷ ಹರ್ಷಿತ್, ಮಕ್ಕಳ ಜೆಸಿ ಅಧ್ಯಕ್ಷ ವಿವಿಯನ್ ಸುವಾರಿಸ್, ಘಟಕದ ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಶಾಲಾ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜೆಸಿ ವತಿಯಿಂದ ಪೂರ್ವಭಾವಿ ಸಾಮಾನ್ಯ ಸಭೆ ನಡೆಸಲಾಯಿತು, ಕಾರ್ಯದರ್ಶಿ ಅಕ್ಷತ್ ರೈ ವಂದಿಸಿದರು.ಗ್ರಾಮಬ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ ಇದರ ಅಧ್ಯಕ್ಷ ಪಿ.ಟಿ ಸಬಾಸ್ಟಿನ್ ಉಪಸ್ಥಿತರಿದ್ದರು.