ಕುತ್ಲೂರು: ಗ್ರಾಮೀಣ ಭಾಗದ ಅಂಗನವಾಡಿ ಮಕ್ಕಳಿಗೆ ನಗರ ಪ್ರದೇಶಗಳ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ನೀಡುವ ವಿದ್ಯಾಭ್ಯಾಸದ ರೀತಿಯಲ್ಲಿ ಮಾಹಿತಿಗಳನ್ನು ನೀಡುವ ದೃಷ್ಟಿಯಿಂದ ಊರಿನ ದಾನಿಗಳಾದ ರಶ್ಮಿ ಹೆಗ್ಡೆ ಮತ್ತು ಪ್ರಶಾಂತ್ ಹೆಗ್ಡೆ ದಂಪತಿಗಳು ಕುತ್ಲೂರು ಅಂಗನವಾಡಿ ಕೇಂದ್ರಕ್ಕೆ ಟಿವಿ ಮತ್ತು ಇಂಟರ್ನೆಟ್ ನ್ನು ಕೊಡುಗೆಯಾಗಿ ನೀಡಿರುತ್ತಾರೆ.ಇದರ ಸದುಪಯೋಗವನ್ನು ಹಳ್ಳಿ ಪ್ರದೇಶವಾಗಿರುವ ಕೂತ್ಲೂರು ಅಂಗನವಾಡಿಯ ಮಕ್ಕಳು ಪಡೆಯಲಿದ್ದಾರೆ.
ಇಂಟರ್ನೆಟ್ ಗೆ ಬೇಕಾಗಿರುವ ಒಂದು ವರ್ಷದ ರೀಚಾರ್ಜ್ ಮೊತ್ತವನ್ನು ಕುತ್ಲೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮಾಡಿರುತ್ತಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ನೀಡುವ ಮಾಹಿತಿಯಿಂದ ಸಣ್ಣ ಮಕ್ಕಳಲ್ಲಿ ಕಲಿಯುವಿಕೆಯ ಆಸಕ್ತಿ ಹೆಚ್ಚಿಸಲಿದ್ದು, ಹೆತ್ತವರಲ್ಲಿ ಇವರ ಈ ಕೊಡುಗೆಯು ಸಂತೋಷವನ್ನು ತಂದಿದೆ ಮತ್ತು ಗ್ರಾಮಸ್ಥರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
p>