ಬೆಳ್ತಂಗಡಿ: ಸುದೇಮುಗೇರು-ಸಂತೆಕಟ್ಟೆ ರಸ್ತೆಯ ಅವ್ಯವಸ್ಥೆ ಪ್ರತಿದಿನ ಈ ರಸ್ತೆಯಲ್ಲಿ ಹಲವಾರು ವಾಹನಗಳು ಸಾಗುತ್ತವೆ ಹಾಗು ಶಾಲಾ ಮಕ್ಕಳು ಕೂಡ ಈ ರಸ್ತೆಯಲ್ಲಿ ನಡೆದುಕೊಂಡು ಸಾಗುವ ಈ ರಸ್ತೆಯಲ್ಲಿ ಅಲ್ಲಲ್ಲಿ ಹಲವಾರು ಗುಂಡಿಗಳು ಕಾಣಸಿಗುತ್ತದೆ.
ಮಳೆ ಬಂದರೆ ಸಾಕು ಚರಂಡಿಯ ನೀರು ರಸ್ತೆಯಲ್ಲಿ ಹರಿಯುವ ಸ್ಥಿತಿ ಈ ಮಾರ್ಗದಲ್ಲಿ ಇದೆ. ಕೆಲವೊಂದು ಕಡೆ ಕಾಂಕ್ರೀಟ್ ಚರಂಡಿ ನಿರ್ಮಿಸಿದ್ದಾರೆ.ಆದರೆ ಆ ಚರಂಡಿಯಲ್ಲಿ ನೀರು ಹೋಗದ ಸ್ಥಿತಿ ನಿರ್ಮಾಣ ಆಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
p>