ಮಲ್ಲೊಟ್ಟು-ಕೊಯ್ಯೂರು ಭಾಗದಲ್ಲಿ ಪರಿಹಾರ ಕಾಣದ ವಿದ್ಯುತ್ ಸಮಸ್ಯೆ- ಸಮಸ್ಯೆ ಬಗೆಹರಿಯದಿದ್ದಲ್ಲಿ ಕಚೇರಿಯಲ್ಲಿ ಧರಣಿ- ಗ್ರಾಮಸ್ಥರ ಆಕ್ರೋಶ

0

ಗೇರುಕಟ್ಟೆ: ಮಲ್ಲೊಟ್ಟು-ಕೊಯ್ಯೂರು ಭಾಗದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ಪದೇ-ಪದೇ ಸಮಸ್ಯೆಗಳು ಎದುರಾಗುತ್ತಿದ್ದು ಜನರು ಕತ್ತಲೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಕೊಯ್ಯೂರಿನಲ್ಲಿ ಫೀಡರ್ ಇದ್ದು, ಮಲ್ಲೊಟ್ಟುನಿಂದ ಕೊಯ್ಯೂರಿಗೆ ಸಂರ್ಪಕದ ವಿದ್ಯುತ್ ಲೈನ್‌ಲ್ಲಿ ರಾತ್ರಿಯಿಂದ ಬೆಳಗ್ಗಿನವರೆಗೆ ವಿದ್ಯುತ್ ಇರುವುದಿಲ್ಲ.

ಈ ಕೊಯ್ಯೂರು ಮತ್ತು ಮಲ್ಲೊಟ್ಟು ಭಾಗಕ್ಕೆ ಬೇರೆ ಬೇರೆ ಪವರ್ ಮ್ಯಾನ್‌ಗಳಿದ್ದರೂ ಕೂಡ ಸಮರ್ಪಕವಾಗಿ ಟ್ರೀ ಕಟ್ಟಿಂಗ್ ನಡೆಸದ ಪರಿಣಾಮ ವಿದ್ಯುತ್ ಸಮಸ್ಯೆ ಉಂಟಾಗಿದೆ. ಮಲ್ಲೊಟ್ಟು ವಿಭಾಗದ ಪವರ್‌ಮ್ಯಾನ್‌ಗೆ ಕೇಳಿದರೆ ಕೊಯ್ಯೂರು ಭಾಗದ ಲೈನ್ ಸಮಸ್ಯೆ ಎಂದಷ್ಟೇ ಉತ್ತರ ಬರುತ್ತದೆ.

ಈ ಬಗ್ಗೆ ಜೆ.ಇ ಮತ್ತು ಎ.ಇ.ಇ ಅವರಿಗೆ ದೂರು ನೀಡಿದ್ದರು ಅವರಿಂದಲೂ ಕೂಡ ಸಮಸ್ಯೆ ಪರಿಹಾರವಾಗದೆ ಸಾರ್ವಜನಿಕರು ಕತ್ತಲಲ್ಲಿ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ.

ರಾತ್ರಿ ವೇಳೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯ ಬಂದರೆ ಅಥವಾ ಮರ ಬಿದ್ದ ಹಾನಿಯಾದನ್ನು ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ, ದೂರವಾಣಿ ಸಂಖ್ಯೆ ಮತ್ತು ವಿಳಾಸ ಕೇಳಿ ಅವರು ಸುಮ್ಮನಾಗುತ್ತಾರೆ.ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ಪರಿಹರಿಸದಿದ್ದಲ್ಲಿ ಮಲ್ಲೊಟ್ಟು-ಕೊಯ್ಯೂರು ವಿಭಾಗದ ವಿದ್ಯುತ್ ಬಳಕೆದಾರರು ಕಚೇರಿಯಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here