


ಬೆಳ್ತಂಗಡಿ: ಯಮತೋ ಶೋಟೋಕಾನ್ ಕರಾಟೆ ಹಾಗೂ ಡ್ರೀಮ್ ಜೋನ್ ನೃತ್ಯ ತರಬೇತಿ ಕೇಂದ್ರದ ಉದ್ಘಾಟನೆ ಬೆಳ್ತಂಗಡಿ ನಾರಾಯಣಗುರು ಸಭಾಭವನದಲ್ಲಿ ಜು.8ರಂದು ನಡೆಯಿತು.
ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು, ಯುವವಾಹಿನಿ ಅಧ್ಯಕ್ಷ ಸದಾಶಿವ, ಕರಾಟೆ ಸಂಸ್ಥೆಯ ರಾಜ್ಯ ಮುಖ್ಯ ಶಿಕ್ಷಕ ನಾರಾಯಣ್ ಪೂಜಾರ್ ಹಾವೇರಿ, ಹಿರಿಯ ಶಿಕ್ಷಕ ಪ್ರಕಾಶ್ ಪೂಜಾರಿ ಹಾಗೂ ಡ್ಯಾನ್ಸ್ ಎಸೋಸಿಯೇಷನ್ ನ ರಾಜ್ಯಧ್ಯಕ್ಷ ರಾಜೇಶ್ ಕಣ್ಣೂರು, ಸಿಟಿ ರಾಕರ್ಸ್ ಡಾನ್ಸ್ ಅಕಾಡೆಮಿ ನಿರ್ದೇಶಕರ ಪ್ರವೀಣ್ ಹಾಗೂ ಡ್ಯಾನ್ಸ್ ಶಿಕ್ಷಕ ಮೋಹಿತ್ ಕುಲಾಲ್ ಉಪಸ್ಥಿತರಿದ್ದರು.

ಕರಾಟೆ ಶಿಕ್ಷಕ ಅಶೋಕ ಆಚಾರ್ಯ ಸ್ವಾಗತಿಸಿ, ಶಯನ್ ಕುಮಾರ್ ವಂದಿಸಿದರು.