ಬಂದಾರು: ಬಂದಾರು ಗ್ರಾಮದಲ್ಲಿ ಎರಡು ಏರ್ಟೆಲ್ ಟವರ್ ಗಳು ಇದ್ದು ಪ್ರಯೋಜನ ಬಾರದಂತೆ ಇದೆ.
ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿಯೂ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಕಂಪೆನಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇಲ್ಲಿನ ಪರಿಸ್ಥಿತಿ ಏನೆಂದರೆ ಇಂಟರ್ನೆಟ್ ಎಂತು ಇಲ್ಲ ಆದರೆ ಸರಿಯಾಗಿ ಮಾತನಾಡಲು ಕೂಡ ನೆಟ್ವರ್ಕ್ ಸಿಗದೆ ಪರದಾಡುತ್ತಿದ್ದಾರೆ.
ಹಿಂದಿನ ಕಾಲದಲ್ಲಿ ಹೇಗೆ ನೆಟ್ವರ್ಕಿಗಾಗಿ ಹುಡುಕಿಕೊಂಡು ಹೋಗಿತ್ತಿದ್ದರೋ ಹಾಗೆಯೇ ಹೋಗುವ ಸನ್ನಿವೇಶ ಉಂಟಾಗಿದೆ.
ಶಾಲಾ ಮಕ್ಕಳಿಗೆ ಯಾವುದೇ ರೀತಿಯ ಶಾಲೆಯಿಂದ ಬಂದಂತಹ ಮೆಸೇಜ್ ಅಥವಾ ವಿದ್ಯಾಭ್ಯಾಸಕ್ಕೆ ಬೇಕಾದಂತ ಕೆಲವೊಂದು ದಾಖಲೆಗಳಾಗಿರಬಹುದು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ.
ಯಾಕೆಂದರೆ ವಾಟ್ಸಪ್ ಮುಖಾಂತರ ನಮಗೆ ಯಾವುದೇ ರೀತಿಯ ಸಂದೇಶಗಳು ಬರುವಾಗ ತಡವಾಗುತ್ತಿದೆ.
ಉದ್ಯೋಗಿಗಳಿಗೂ ನೆಟ್ವರ್ಕ್ ಸಮಸ್ಯೆ ಎದುರಾಗುತ್ತಿದೆ. ಅಧಿಕಾರಿಗಳಿಗೆ ತಿಳಿಸಿದರು ಸರಿ ಮಾಡುತ್ತೆ ಎಂದು ಹೇಳಿದರು ಮೂರು ದಿನ ಮತ್ತೆ ಅದೇ ರಾಗ ಅದೇ ತಾಳ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಿರಂತರ ಸಮಸ್ಯೆ – ದಿನೇಶ್ ಗೌಡ
ಊರಿನ ಎಲ್ಲಾ ನಾಗರಿಕರು ಮತ್ತು ವಿದ್ಯಾರ್ಥಿಗಳು ನನಗೆ ಕರೆ ಮಾಡಿ ಈ ಸಮಸ್ಯೆಯನ್ನು ಬಗೆಹರಿಸಲು ಮನವಿಯನ್ನು ಮಾಡಿರುತ್ತಾರೆ.
ನಿರಂತರ ನೆಟ್ವರ್ಕ್ ಸಮಸ್ಯೆ ಎದುರಾಗುತ್ತಿದ್ದು ಶೀಘ್ರವೇ ಬಗೆಹರಿಸಬೇಕು ಎಂದು ಬಂದಾರು ಗ್ರಾ.ಪಂ.ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಹೇಳಿದರು.