ಗೇರುಕಟ್ಟೆ: ಭಾರತೀಯ ಭೂ ಸೇನೆಯಲ್ಲಿ 20ವರ್ಷ ಭಾರತಾಂಬೆಯ ಸೇವೆಗೈದು ನಿವೃತ್ತಿ ಹೊಂದಿ ಊರಿಗೆ ಆಗಮಿಸಿದ ನ್ಯಾಯತರ್ಪು ಗ್ರಾಮದ ವಂಜಾರೆ ಯೋಧ ವಿಕ್ರಂ ಜೆ.ಎನ್. ರವರಿಗೆ ಅಭಿನಂದನಾ ಕಾರ್ಯಕ್ರಮ ಜು.3ರಂದು ಗೇರುಕಟ್ಟೆ ಸಹಕಾರಿ ಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಅಭಿನಂದನಾ ಸಮಿತಿಯ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆಯನ್ನು ವಹಿಸಿದರು.ಈ ವೇಳೆ ಕಳಿಯ, ನ್ಯಾಯತರ್ಪು, ಓಡಿಲ್ನಾಳ ಅಭಿನಂದನಾ ಸಮಿತಿಯಿಂದ ಹಾಗೂ ಎಲ್ಲ ಸಂಘ ಸಂಸ್ಥೆಗಳಿಂದ ಯೋಧ ವಿಕ್ರಂ ಜೆ.ಎನ್ ದಂಪತಿಯನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಕಳಿಯ ಗ್ರಾ.ಪಂ. ಅಧ್ಯಕ್ಷ ದಿವಾಕರ ಎಂ., ಬೆಳ್ತಂಗಡಿ ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ಮೇಜರ್ ಜನರಲ್ ಎಂ.ವಿ. ಭಟ್, ಮಾವಿನಕಟ್ಟೆ ಸಂತ ಅನ್ನಾರವರ ಚರ್ಚ್, ಫಾದರ್ ಬೆರ್ನಾಡ್, ಬೆಳ್ತಂಗಡಿ ಮಾಜಿ ಸೈನಿಕರ ಸಂಘ ಅಧ್ಯಕ್ಷ ಮಹಮ್ಮದ್ ರಫಿ, ನಿವೃತ್ತ ಹಾಸನ ಸೈನಿಕ ಕ್ಯಾಪ್ಟನ್ ಬೆಟ್ಟೇ ಗೌಡ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಪರಪ್ಪು ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ಪೆಲತ್ತಳಿಕೆ, ಸದಸ್ಯರಾದ ತಂಗಚ್ಚನ್ ಸುರೇಶ್ ಗೌಡ, ಸುಬ್ರಮಣಿ, ದಿನೇಶ್ ಗೌಡ, ಯೋಧನ ಪೋಷಕರಾದ ಶ್ರೀಮತಿ ನಾಗವೇಣಿ ಮತ್ತು ಜನಾರ್ಧನ ಪೂಜಾರಿ ವಂಜಾರೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಧ್ಯಕ್ಷರು, ಸಂಚಾಲಕರು, ಕೋಶಾಧಿಕಾರಿ ಮತ್ತು ಕಳಿಯ, ನ್ಯಾಯತರ್ಪು, ಓಡಿಲ್ನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.ಮಾಜಿ ಸೈನಿಕ ಸಂಘದ ಕಾರ್ಯದರ್ಶಿ ಉಮೇಶ್ ಕಾರ್ಯಕ್ರಮ ನಿರೂಪಿಸಿ, ಸುರೇಶ ಆರ್. ಎನ್ ಸ್ವಾಗತಿಸಿ, ನೇವಿಲ್ ಸ್ಟಿವನ್ ಮೋರಸ್ ಧನ್ಯವಾದವಿತ್ತರು.