ನೆರಿಯ: ವ್ಯಾಪ್ತಿಯ ಕೇಂದ್ರ ಭಾಗವಾದ ಅಣಿಯೂರು ಪೇಟೆಯಲ್ಲಿರುವ ಸೇತುವೆ ಬದಿಯಲ್ಲಿ ಕಸದ ರಾಶಿಯಿಂದ ಕೂಡಿದೆ. ಇದರಿಂದ ನೀರು ಕಲುಷಿತವಾಗುತ್ತಿದೆ. ಸರಕಾರ ಸ್ಚಚ್ಚತೆಗೆ ಸಾವಿರಾರು ರೂಪಾಯಿಗಳನ್ನು ವಿನಿಯೋಗ ಮಾಡುತ್ತಿದೆ ಆದರು ಹೊಳೆಯ ಬದಿಯಲ್ಲಿ ಕಸದ ರಾಶಿ ನೋಡದೆ ಗ್ರಾ.ಪಂ ಕಾಣಿದ್ದು ಕುರುಡಾಗಿದೆ.ಸ್ವಚ ಭಾರತ್ ಪರಿಕಲ್ಪನೆಯಲ್ಲಿ ಗ್ರಾಮ ಪಂಚಾಯತ್ ನಲ್ಲಿ ತ್ಯಾಜ್ಯ ವೀಲೆವಾರಿ ಘಟಕವಿದ್ದು ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿದೆ.
ಡೆಂಗ್ಯೂ ಜ್ವರಕ್ಕೆ ದಾರಿ: ಕಸದ ರಾಶಿಯಿಂದ ಸೊಳ್ಳೆಗಳು ಉತ್ಪತ್ತಿಯಾಗಲು ಪೂರಕವಾಗಿದೆ. ಇದರಿಂದ ಅನಾರೋಗ್ಯ ಉಂಟಾಗುವ ಸಂಭವ ಹೆಚ್ಚಾಗಿದೆ.
ಪೆಟ್ರೋನೆಟ್ ಎಮ್.ಎಚ್.ಬಿ.ಲಿಮಿಟೆಡ್ ನಿಂದ ತ್ಯಾಜ್ಯ ವಿಲೇವಾರಿ ವಾಹನವನ್ನು ಗ್ರಾಮ ಪಂಚಾಯತ್ ಗೆ ತ್ಯಾಜ್ಯ ವಿಲೇವಾರಿ ಪೆಟ್ರೋನೆಟ್ ಎಮ್.ಎಚ್.ಬಿ.ಲಿಮಿಟೆಡ್ ನಿಂದ ಕೊಡುಗೆಯನ್ನು ನೀಡಿದ್ದಾರೆ.ವಾರಕ್ಕೆ ಒಂದು ದಿನ ವಿಲೇವಾರಿ ವಾಹನದ ಮೂಲಕ ತ್ಯಾಜ್ಯ ಸಾಗಿಸಲಾಗುತ್ತದೆ.ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಆಗಿರುವುದು ಒಳ್ಳೆಯ ವಿಚಾರನೇ, ಆದರೆ ಸ್ಚಚ್ಚತೇ ಕಾಪಾಡುವಲ್ಲಿ ವಿಫಲವಾಗಿ ಇನ್ನಾದರು ಗ್ರಾ.ಪಂ ಎಚ್ಚೆತ್ತುಕೊಂಡು ಗ್ರಾಮದ ಸ್ಚಚ್ಚತೆಯನ್ನು ಕಾಪಾಡುವಲ್ಲಿ ಸಹಕರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.