ಕುಟ್ಟಿಕಲ ಶಾಲೆಯಲ್ಲಿ ಮಳೆ ನೀರು ಸೊರಿಕೆ, ದುರಸ್ತಿಗೆ ಆಗ್ರಹ- ಶೌಚಾಲಯ ನಿರ್ಮಾಣಕ್ಕೆ ಬಿಓ ಭರವಸೆ

0

ತೆಕ್ಕಾರು: ತೆಕ್ಕಾರು ಗ್ರಾಮದ ಬಾಜಾರುವಿನ ಕುಟ್ಟಿಕಲ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ 1983ರಲ್ಲಿ ನಿರ್ಮಾಣವಾಗಿದ್ದು ಇದುವರೆಗೆ ಯಾವುದು ದುರಸ್ತಿ ಆಗಿರುವುದಿಲ್ಲ. ಕಟ್ಟಡದ ಅಂಚುಗಳು ಪಕ್ಕಾಸು ರೀಪು ಎಲ್ಲಾ ಗೆದ್ದಲಿಡಿದಿದೆ. ಶಾಲಾ ಸಮಯದಲ್ಲಿ ನೀರು ಸೋರಿಕೆಯಾಗಿ ಮಕ್ಕಳಿಗೆ ಕುಳಿತುಕೊಳ್ಳಲು ಕಷ್ಟಕರವಾಗಿರುತ್ತದೆ ಅಲ್ಲದೆ ಈ ಶಾಲೆಯಲ್ಲಿ ಸಮರ್ಪಕವಾದ ಯಾವುದೇ ರೀತಿಯ ಶೌಚಾಲಯ ಇಲ್ಲ. ಸಂಬಂಧಪಟ್ಟ ಇಲಾಖೆಗೆ ಮತ್ತು ಶಿಕ್ಷಣ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜವಾಗಲಿಲ್ಲ ಶೀಘ್ರವೇ ಸರಿಪಡಿಸಬೇಕು ಎಂದು ಎಸ್‌ಡಿಎಮ್‌ಸಿ, ಪಂವಚಾಯತ್ ಆಗ್ರಹಿಸಿದ್ದರು.

ಶಾಲೆಗೆ ಭೇಟಿ ನೀಡಿದ ಬಿಓ ತಾರಕೇಸರಿ ಅವರು ಶೌಚಾಲಯ ನಿರ್ಮಾಣಕ್ಕೆ ಭರವಸೆ ನೀಡಿದ್ದಾರೆ. ಆರ್‌ಸಿಸಿ ಕೊಠಡಿಗಳ ನೀಡಬೇಕು ಎಂದು ಇಓ ಬಳಿ ಬೇಡಿಕೆ ಇಟ್ಟಿದ್ದಾರೆ. ಗ್ರಾ.ಪಂ.ಅಧ್ಯಕೆ ರಹಿಯಾನತ್, ಪಿಡಿಒ ಸುಮಯ್ಯ, ಗ್ರಾ.ಪಂ.ಸದಸ್ಯ ಅಬ್ದುಲ್ ರಝಾಕ್, ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here