ಶಿಬಾಜೆಯಲ್ಲಿ ವಿದ್ಯುತ್ ಸ್ಪರ್ಶಸಿ ಯುವತಿ ಮೃತಪಟ್ಟ ಘಟನೆ: ಪರಿಹಾರ ನೀಡಲು ಗ್ರಾಮಸ್ಥರಿಂದ ಮೆಸ್ಕಾಂಗೆ ಮನವಿ

0

ಶಿಬಾಜೆ: ಗ್ರಾಮದ ಬರ್ಗುಳ ಎಂಬಲ್ಲಿ ಗಣೇಶ್‌ ಶೆಟ್ಟಿ ಅವರ ಮಗಳಾದ ಕು.ಪ್ರತೀಕ್ಷಾ ಅವರು ಇಂದು ಸಂಜೆ (ಜೂ.27)  ಸುಮಾರು ನಾಲ್ಕರ ಹೊತ್ತಿಗೆ ತನ್ನ ಮನೆಯ ಎದುರು ಇದ್ದ ವಿದ್ಯುತ್‌ ಕಂಬದಿಂದ ವಿದ್ಯುತ್‌ ಪ್ರವಾಹವಾಗಿ ಅನಿರೀಕ್ಷಿತವಾಗಿ ಮರಣ ಹೊಂದಿದ್ದಾರೆ.

ಈ ಕಂಬದಲ್ಲಿ ಇದು ಸತತವಾಗಿ ಮೂರನೇ ಬಾರಿ ವಿದ್ಯುತ್‌ ತೊಂದರೆಯಾಗುತ್ತಿರುವುದು ಎಂದು ಹೇಳಲಾಗಿದೆ.ಈ ರೀತಿಯ ವಿದ್ಯುತ್‌ ಅವಘಡದ ಕುರಿತು ಈ ಮೊದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದ್ದರೂ, ಇಲಾಖೆ ನಿರ್ಲಕ್ಷ್ಯ ತೋರಿದ ಪರಿಣಾಮ ಈ ಅವಘಡಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಇಲಾಖೆಯ ಈ ಬೇಜವಾಬ್ದಾರಿಯಿಂದ ಈ ಅವಘಡ ಸಂಬಂಧಿಸಿದ್ದು, ಇದರ ಜವಾಬ್ದಾರಿ ಹೊತ್ತು ಗಣೇಶ್‌ ಶೆಟ್ಟಿ ಅವರ ಕುಟುಂಬದ ಒಬ್ಬ ಸದಸ್ಯರಿಗೆ ವಿದ್ಯುತ್‌ ಇಲಾಖೆಯಲ್ಲಿ ಉದ್ಯೋಗ ಹಾಗೂ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.

LEAVE A REPLY

Please enter your comment!
Please enter your name here