ಎಸ್.ಡಿ.ಎಂ. ನೆನಪಿನಂಗಳದ ಹದಿಮೂರನೇ ಕಂತಿನ ಕಾರ್ಯಕ್ರಮ, ಸಹಾಯಧನ ಹಸ್ತಾಂತರ- ಬಡತನವು ಸಾಧನೆಗೆ ತಡೆಗೋಡೆ ಎಂದು ಭಾವಿಸದಿರಿ: ಡಾ. ಪ್ರಭಾಕರ ಶಿಶಿಲ

0

ಉಜಿರೆ: ಬಡತನವು ನಿಮ್ಮ ಸಾಧನೆಗೆ ತಡೆ ಗೋಡೆ ಎಂದು ತಿಳಿಯಬಾರದು. ಛಲ ಒಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಹಾಗಾಗಿ ನೀವು ಎದುರಿಸುತ್ತಿರುವ ಬಡತನ ನಿಮ್ಮ ಸಾಧನೆಗೆ ದಾರಿಯಾಗುತ್ತದೆ ಎಂದು ಹೇಳಿದರು.

ಎಸ್.ಡಿ.ಎಂ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಎಸ್.ಡಿ.ಎಂ ನೆನಪಿನಂಗಳ ಕಾರ್ಯಕ್ರಮವು ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಜೂ. 27ರಂದು ನಡೆಯಿತು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಬಿ.ಪ್ರಭಾಕರ ಶಿಶಿಲ ಆಗಮಿಸಿದ್ದರು.

ಮನುಷ್ಯನ ಜೀವನದಲ್ಲಿ ಸ್ವಾರ್ಥ ಎಂಬುದು ಇರಬಾರದು ಎಲ್ಲರಲ್ಲಿ ನಾನೊಬ್ಬ ಎಂದು ಅರಿತು ಸಮನ್ವಯತೆಯಲ್ಲಿ ಬಾಳಬೇಕು.ಈಗಿನ ಮಕ್ಕಳ ದೊಡ್ಡ ಸಮಸ್ಯೆ ಎಂದರೆ ಪ್ರಶ್ನೆ ಕೇಳದಿರುವುದು. ಪ್ರಶ್ನೆ ಕೇಳದಿದ್ದರೆ ಸರ್ವಾಧಿಕಾರ ನಡೆಯುತ್ತದೆ .ಹಾಗಾಗಿ ನಿಮ್ಮ ಜೀವನದಲ್ಲಿ ಪ್ರಶ್ನಿಸುವ ಗುಣವನ್ನು ಅಳವಡಿಸಿಕೊಳ್ಳಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಬಿ.ಎ.ಕುಮಾರ ಹೆಗ್ಡೆ ನಮ್ಮ ಈ ಕಾಲೇಜಿನಿಂದ ಸಾವಿರಾರು ವಿದ್ಯಾರ್ಥಿಗಳು ಕಲಿತು ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಅವರ ಅನುಭವಗಳನ್ನು ಈಗಿನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಇಂತಹ ಕಾರ್ಯಕ್ರಮವು ಪೂರಕವಾಗಿದೆ ಎಂದು ನುಡಿದರು.ಈ ಸಂದರ್ಭದಲ್ಲಿ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿನಿ ತೃತೀಯ ಬಿ ಎಸ್ ಸಿ ಚಿತ್ರಾವತಿ ಇವರಿಗೆ ಸಹಾಯ ಧನವನ್ನು ಶಿಶಿಲ ಅವರು ನೀಡಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು.

ಕಾರ್ಯಕ್ರಮವನ್ನು ದಿವಾಕರ ಕೊಕ್ಕಡ ನಿರೂಪಿಸಿ, ಡಾ.ಎಂ.ಪಿ ಶ್ರೀನಾಥ ಸ್ವಾಗತಿಸಿದರು.ಅಭಿಲಾಷ್ ವಂದಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿತಾಂಬರ ಹೆರಾಜೆ, ಕಾಲೇಜಿನ ಹಿರಿಯ ವಿದ್ಯಾರ್ಥಿ ತಿಮ್ಮಪ್ಪ ಗೌಡ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here