ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್ಸ್, ಬುಲ್ ಬುಲ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತಂಬಾಕು ರಹಿತ ಜಾಗೃತಿಯನ್ನು ಮೂಡಿಸಿದರು.ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಚಿತ್ರಕಲೆ, ಪ್ರಬಂಧ, ಕವನವನ್ನು ರಚಿಸಿದರು.
ತಂಬಾಕು ರಹಿತ ಕಾರ್ಯಕ್ರಮದನ್ವಯ ಆರೋಗ್ಯ ಇಲಾಖೆಯಿಂದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್ ಮಾಹಿತಿಯನ್ನು ನೀಡಿದರು.ಅಲ್ಲದೆ ಸಿಸ್ಟರ್ ರಮ್ಯಾ ಹದಿಹರೆಯದ ಬಗ್ಗೆ ಮಕ್ಕಳಿಗೆ ತಿಳಿಯ ಪಡಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಸೋಮಶೇಖರ್ ಶೆಟ್ಟಿ ಮಕ್ಕಳಿಗೆ ಸ್ಕೌಟ್ಸ್ ಚಳವಳಿಯ ಬಗ್ಗೆ ತಿಳಿಯ ಪಡಿಸಿದರು.
ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು. ಕ್ಲಬ್ ಬುಲ್ ಬುಲ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಸಂಘಟನೆ ಹಾಗೂ ನಿರೂಪಣೆ ಸ್ವಾಗತ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಗೈಡರ್ ಪ್ರಮೀಳಾ ನೆರವೇರಿಸಿದರು. ಸ್ಕೌಟ್ಸ್ ಮಾಸ್ಟರ್ ಮಂಜುನಾಥ್ ವಂದಿಸಿದರು.