ಉಜಿರೆ: ಕಳೆದ ಹಲವು ವರ್ಷಗಳಿಂದ ಉನ್ನತ ರೀತಿಯ ತಾಂತ್ರಿಕ ಶಿಕ್ಷಣವನ್ನು ನೀಡಿ ಉತ್ತಮ ಉದ್ಯೋಗಾವಕಾಶ ಕಲ್ಪಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಂದಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ 2023-24ನೇ ಸಾಲಿನಲ್ಲಿ ಕೂಡ ಅತಿ ಹೆಚ್ಚು ವಿದ್ಯಾರ್ಥಿಗಳಿಗೆ ಕಾಲೇಜಿನಿಂದಲೇ ನೇರ ನೇಮಕಾತಿ ನಡೆಸಿ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ. ಬಹುರಾಷ್ಟ್ರೀಯ ಪ್ರತಿಷ್ಠಿತ ಕಂಪನಿಗಳಾದ BOSCH, Tata Consulting Engineers, TVS, Toyota Kirlosker Motor Pvt Ltd, Asian Paints, Schnieder electric, Centum Electronics, Unimac Aerospace, Kirloskar Electric, Qcrete Readymix, Sindhu Corporation, Technolab Solutions,Wipro GE Health care, Volvo Group India, TATA Electronics ಇಂತಹ ಸುಮಾರು 40ಕ್ಕೂ ಹೆಚ್ಚು ಕಂಪನಿಗಳು ಸುಮಾರು 100ಕ್ಕೂ ಹೆಚ್ಚು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ.
ಪ್ರಥಮ ವರ್ಷದ ಪ್ರವೇಶಾತಿ ಆರಂಭ: 2024-25ನೆಯ ಸಾಲಿನ ಪಾಲಿಟೆಕ್ನಿಕ್ ಕೋರ್ಸಿನ ಪ್ರಥಮ ವರ್ಷಕ್ಕೆ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ದಾಖಲಾತಿ ಆರಂಭಗೊಂಡಿದ್ದು ಉತ್ತಮ ರೀತಿಯ ತಾಂತ್ರಿಕ ಶಿಕ್ಷಣ ಬಯಸುವವರು ಕಾಲೇಜಿನ ಆಡಳಿತ ಮಂಡಳಿಯನ್ನು ಸಂಪರ್ಕಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ 9845893731, 9880724085 ನಂಬರ್ ಅನ್ನು ಸಂಪರ್ಕಿಸಿ.
ಕಾಲೇಜಿನ ವೈಶಿಷ್ಟ್ಯಗಳು: ಬಹು ಬೇಡಿಕೆಯ 1.ಸಿವಿಲ್ ಇಂಜಿನಿಯರಿಂಗ್, 2.ಕಂಪ್ಯೂಟರ್ ಸೈನ್ಸ್, 3.ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್, 4.ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸುಗಳು
ಆಡಿಯೋ/ವಿಡಿಯೋ ತರಗತಿಗಳ ಜೊತೆ ನುರಿತ ಪ್ರಾಧ್ಯಾಪಕ ವರ್ಗ, ಶೇಕಡಾ 100% ಉದ್ಯೋಗಾವಕಾಶ, ಹಾಸ್ಟೆಲ್ ಸೌಲಭ್ಯ, Bosch company ಪ್ರಾಯೋಜಿತ ವಿಶೇಷ ತಂತ್ರಜ್ಞಾನ ಆಧಾರಿತ ಪ್ರಯೋಗಾಲಯ, ಭಾರತ ಸರ್ಕಾರದ AICTE ಮತ್ತು ಕರ್ನಾಟಕ ಸರ್ಕಾರದ DTE ನಿಂದ ಮಾನ್ಯತೆ ಪಡೆದ ಸಂಸ್ಥೆ, Putting value into Education ಎಂಬ ವಿಶೇಷ ಧ್ಯೆಯ ವಾಕ್ಯದಡಿ ನಡೆಯುತ್ತಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯಿಂದ ನಡೆಸಲ್ಪಡುತ್ತಿರುವ ಕಾಲೇಜು ಇದಾಗಿದೆ.