

ಹಲೇಜಿ: ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿ ರಚನೆ ಜೂ.25ರಂದು ಕೆ.ಯೋಗೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಊರಭಕ್ತರ ಮಹಾಸಭೆ ಕರೆದು ಸಮಿತಿ ರಚಿಸಲಾಯಿತು. ಆಡಳಿತ ಸಮಿತಿಯ ಸದಸ್ಯರುಗಳಾಗಿ ರವಿಪ್ರಸಾದ್ ಕೊರಂಗಿನ್ನಾಯ, ಅಜಿತ ಕುಮಾರ್ ಕೆ ಎನ್, ಅಣ್ಣಿಗೌಡ ಪುಷ್ಪಗಿರಿ, ಸತೀಶ್ ಭಟ್ಟ ಹಲೇಜಿ, ಅತುಲ್ ಕುಮಾರ್ ಕೆ.ಎನ್, ನಿರೂಪ ಎಸ್ ಆಳ್ವ, ಪದ್ಮನಾಭ ಶಿಲ್ಪಿ ಪಿಲಿಗೂಡು, ಸೇಸಪ್ಪ ಗೌಡ ಮುಂಡ್ರೊಟ್ಟು, ರುಕ್ಮಯ ಮೂಲ್ಯ ಹಲೇಜಿ, ವಾಸು ನಾಯ್ಕ ಹಲೇಜಿ ಹಾಗೂ ಶೆಟ್ಟಿ ರವರನ್ನು ಆಯ್ಕೆ ಮಾಡಲಾಯಿತು.

ಸೇವಾ ಸಮಿತಿಯ ಅಧ್ಯಕ್ಷರಾಗಿ ಕೆ ಯೋಗೇಶ್ ಕುಮಾರ್, ಕಾರ್ಯಧ್ಯಕ್ಷರಾಗಿ ಸುಧೀರ್ ಕುಮಾರ್ ಕೆ.ಎನ್, ಉಪಾಧ್ಯಕ್ಷರುಗಳಾಗಿ ಕಿರಣ್ ಚಂದ್ರ ಪುಷ್ಪಗಿರಿ, ಮಹಾಬಲ ಶೆಟ್ಟಿ ಮುಂಡ್ರೋಟ್ಟು, ಸುಬ್ರಹ್ಮಣ್ಯ ಭಟ್ ಹಲೇಜಿ, ಪ್ರವೀಣ್ ರೈ ಕುಪ್ಪೆಟ್ಟಿ, ರೋಹಿತ್ ಶೆಟ್ಟಿ ಪುಯಿಲ, ಹರಿಪ್ರಸಾದ್ ಪೂಂಜಾ ಬೆಂಗಾಯಿ, ರಮೇಶ್ ಗೌಡ ಬನಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಎಚ್ ಎಲ್ ಹಲೇಜಿ, ಕಾರ್ಯದರ್ಶಿಯಾಗಿ ಚಿರಣ್ ಮುಂಚೇರಿ ಮತ್ತು ರಾಜಗೋಪಾಲ್ ಕುಕ್ಕಾಜೆ, ಕೋಶಾಧಿಕಾರಿಯಾಗಿ ಭಾಸ್ಕರ್ ಬಳಕದೋಟ ಮತ್ತು ಸುಮತಿ ಜನಾರ್ಧನ್ ಬೆಂಗಾಯಿ ಆಯ್ಕೆಯಾದರು.
ಸೇವಾ ಸಮಿತಿಯ ಸದಸ್ಯರುಗಳಾಗಿ ಒಟ್ಟು 28 ಸದಸ್ಯರು ಆಯ್ಕೆಯಾಗಿದ್ದಾರೆ.